ಬೆಂಗಳೂರು: ಆನ್ ಲೈನ್ ಆ್ಯಪ್ ನಲ್ಲಿ ಸಾಲ ಸಿಗುತ್ತೆ.ಅಲ್ಲಿ ಹಣ ಹೂಡಿಕೆ ಮಾಡಿದ್ರೆ ಮನಿ ಡಬಲ್ ಆಗಿತ್ತೆ. ಈಸಿಯಾಗಿ ದುಡ್ಡು ಮಾಡಬಹುದು ಅನ್ನೋರು ಈ ಸ್ಟೋರಿ ನೋಡ್ಲೇಬೇಕು.
ಇಲ್ಲಿ ಜೋಡಿಸಿರೋ ಕಂತೆ ಕಂತೆ ನೋಟು, ಚಿನ್ನ, ಇವೆಲ್ಲಾ ಯಾರೋ ಮನೆಗಳ್ಳರನ್ನ ಹಿಡಿದು ಸೀಜ್ ಮಾಡಿರೋದಲ್ಲ. ಬದಲಿಗೆ ಅಧಿಕ ಬಡ್ಡಿ, ಮನಿ ಡಬಲ್ ಆಸೆಗೆ ಬಿದ್ದು ಕೋಟಿ ಉಂಡೇ ನಾಮ ಹಾಕಿಸಿಕೊಂಡಿದ್ದ ಜನರ ದುಡ್ಡು, ಇಂತಹದೊಂದು ದೊಡ್ಡಜಾಲವನ್ನ ಸಿಸಿಬಿ ಸೈಬರ್ ಕ್ರೈಂ ಇನ್ಸ್ಪೆಕ್ಟರ್ ಅಶೋಕ್ ಅಂಡ್ ಟೀಂ ಹೆಡೆಮುರಿ ಕಟ್ಟಿದೆ.
ಲಾಕ್ ಡೌನ್ ವೇಳೆ ಆರೋಪಿಗಳು ಕಸ್ಟಮರ್‌ಗೆ ಗಾಳ ಹಾಕಲು ಗೂಗಲ್ ಫ್ಲೇ ಸ್ಟೋರ್ ಮುಖಾಂತರ ಶೇರ್ ಹ್ಯಾಶ್ ಆಫ್ಲೀಕೇಷನ್ ಇನ್ ಸ್ಟಾಲ್ ಮಾಡುವಂತೆ ಮೆಸೇಜ್ ಮಾಡುತ್ತಿದ್ದರು.ಶೇರ್ ಹ್ಯಾಶ್ ಚೈನಿ ಅಪ್ಲಿಕೇಷನ್ ಮೂಲಕ ಹಿಲೀಯಮ್ ಕ್ರಿಪ್ಟೋ ಟೋಕನ್ ಡಿಜಿಟಲ್ ರೂಪದಲ್ಲಿ ಹೆಚ್ಚಿನ ಹಣ ಹೂಡಿಕೆ ಮಾಡಿದರೆ ಕಡಿಮೆ ಸಮಯದಲ್ಲಿ ಹೆಚ್ಚಿನ ಹಣ ಸಂಪಾದಿಸಬಹುದು ಎಂದು ಗ್ರಾಹಕರಿಗೆ ಕಲರ್ ಕಲರ್ ಕಾಗೆ ಹಾರಿಸಿ ಬುಟ್ಟಿಗೆ ಬೀಳಿಸ್ತಿದ್ರು. ವಂಚಕರ ಮಾತನ್ನ ನಂಬಿದ ಆರೋಪಿಗಳು ಹಣ ಹೂಡಿಕೆ ಮಾಡಿದ್ರು.
ಗ್ರಾಹಕರಿಗೆ ನಂಬಿಕೆ ಬರಲು ಆರಂಭದಲ್ಲಿ ಹೆಚ್ಚು ಬಡ್ಡಿ ಹಣ ನೀಡುತ್ತಿದ್ದರು. ಹೂಡುವವರ ಸಂಖ್ಯೆ ಹೆಚ್ಚಾದಂತೆ ಶೇರ್ ಹ್ಯಾಶ್ ಡಾಟ್ ಕಾಮ್ ಕಂಪನಿಗೆ ಐದು ಕಂಪನಿಗಳಾದ ಕೋಟ್ಯಾಟ ಟೆಕ್ನಾಲಜಿ ಕಂಪೆನಿ, ಸಿರಾಲಿನ್ ಟೆಕ್ ಸಲ್ಯೂಷನ್ ಪ್ರೈವೈಟ್ ಲಿಮಿಟೆಡ್, ನೈಲಿನ್ ಇನ್ ಪೋಟೆಕ್ ಪ್ರೈವೈಟ್ ಲಿಮಿಟೆಡ್, ಮಾಲ್ಟ್ರೆಸ್ ಎಕ್ಸಿಮ್ ಪ್ರೈವೈಟ್ ಲಿಮಿಟೆಡ್ ಹಾಗೂ ಕ್ರಾಪಿಂಗಟನ್ ಟೆಕ್ನಾಲಜಿ ಪ್ರೈವೈಟ್ ಕಂಪೆನಿಗಳಿಗೆ ಲಿಂಕ್ ಮಾಡಿ ಅದರ ಬ್ಯಾಂಕ್ ಖಾತೆಗಳಿಗೆ ಸಾರ್ವಜನಿಕರಿಂದ ಕೋಟಿಗಟ್ಟಲೆ ಹಣ ಹೂಡಿಕೆ ಮಾಡುತ್ತಿದ್ದರು.
ಡಿಜಿಟಲ್ ಕರೆನ್ಸಿಯಲ್ಲಿ ಇನ್ವೆಸ್ಟ್ ಮಾಡಿ ಹೆಚ್ಚಿನ ಲಾಂಭಾಂಶ ಪಡೆಯಲು ಜನ ಹೂಡಿಕೆ ಮಾಡಿದ್ದು ಇದನ್ನೇ ಬಂಡವಾಳ ಮಾಡಿಕೊಂಡು ಜನರಿಗೆ ಮೋಸ ಮಾಡುತ್ತಿದ್ದರು. ಮೂರು ತಿಂಗಳ ಹಿಂದೆ ಚೈನೀಸ್ ಆ್ಯಪ್ ವಂಚನೆ ಬಗ್ಗೆ ದೂರು ಬಂದಿತ್ತು.
ಸಾವಿರಾರು ಜನರು ಕ್ರಿಪ್ಟೊ ಕರೆನ್ಸಿ ವಹಿವಾಟಿನಲ್ಲಿ ಕೆಲಸ ಮಾಡ್ತಿದ್ದಾರೆ ಅಂತಾ ಜನರನ್ನ ನಂಬಿಸುತ್ತಿದ್ದರು.
5 ಸಾವಿರ ಇನ್ವೆಸ್ಟ್ ಮಾಡಿದ್ರೆ ಪ್ರತಿ ದಿನ 49 ರೂಪಾಯಿ ಬಡ್ಡಿ ಕೊಡುತ್ತಿದ್ದರು. ಜನರಿಗೆ ನಂಬಿಕೆ ಬಂದು ಹಣ ಹೂಡಿಕೆ ಮಾಡೋಕೆ ಶುರು ಮಾಡಿದ್ದರು. ಇದಕ್ಕಾಗಿ 900 ವಾಟ್ಸಾಪ್ ಗ್ರೂಪ್ ಗಳಲ್ಲಿ ಪ್ರತಿ ಗ್ರೂಪ್ ನಲ್ಲಿ 256 ಜನ ಸದಸ್ಯರಾಗಿದ್ದರು.
2022ರ ಜನವರಿಯಲ್ಲಿ ಶೇರ್ ಷಾ ಅಪ್ಲಿಕೇಷನ್ ದೋಷಪೂರಿತವಾಗಿದೆ ಅದನ್ನ ಅಪ್ಡೇಟ್ ಮಾಡಿ ಎಂದು ಸಂದೇಶ ರವಾನಿಸಿದ್ದರು. ಹೊಸ ಅಪ್ಲಿಕೇಷನ್ ಆದ 2.0 ಹೊಸ ಅಪ್ಲಿಕೇಷನ್ ಬಿಡುಗಡೆ ಮಾಡ್ತಿವಿ ಎಂದು ನಂಬಿಸಿದ್ದರು.ಹೇಳಿದ ಸಮಯಕ್ಕೆ ಅಪ್ಲಿಕೇಷನ್ ಅಪ್ಗ್ರೇಡ್ ಆಗಿಲ್ಲ. ಹೂಡಿಕೆದಾರರಿಗೆ ಯಾವುದೇ ರಿಟರ್ನ್ ನೀಡಿರಲಿಲ್ಲ. ಈ ಸಂಬಂಧ ಪರಿಶೀಲಿಸಿದಾಗ ಮೋಸವಾಗಿರೋದು ಬೆಳಕಿಗೆ ಬಂದಿದೆ. ಈ ಸಂಬಂಧ ಇಮ್ರಾನ್, ಶೀತಲ್ ಬಸ್ತವಾಡಿ ಜಬಿವುಲ್ಲಾಖಾನ್, ರೆಹಮತ್ ಉಲ್ಲಾಖಾನ್, ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಸುಮಾರು 40 ಕೋಟಿ ಹಣ ವಂಚಿಸಿದ್ದು ಸದ್ಯ 15 ನಗದು ಹಣ ಹಾಗೂ 2 ಕೋಟಿ ಮೌಲ್ಯದ ಚಿನ್ನಾಭರಣ ಸೇರಿ 17 ಕೋಟಿ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.
ಶ್ರೀನಿವಾಸ್ ಚಂದ್ರ ಕ್ರೈಂ ಬ್ಯೂರೋ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
18/04/2022 04:37 pm