ಬೆಂಗಳೂರು:ಪರಪ್ಪನ ಅಗ್ರಹಾರದಲ್ಲಿ ಪರಿಚಯವಾಗಿ ನಂತರ ದೊಡ್ಡ ಮನೆ ಕೊಳ್ಳೆ ಹೊಡಿಯೊ ಕಳ್ಳರ ಕನಸಿಗೆ ಪೊಲೀಸ್ರು ಎಳ್ಳುನೀರು ಬಿಟ್ಟಿದ್ದಾರೆ.
ಹೌದು ಧೀಡಿರ್ ಶ್ರೀಮಂತರಾಗೋ ಪ್ಲಾನ್ ನಲ್ಲಿದ್ದ ರೌಡಿ ಶೀಟರ್ ಮಂಜುನಾಥ್ ಹಾಗೂ ವೆಂಕಟೇಶ್ ಪೊಲೀಸರಿಂದ ಲಾಕ್ ಆಗಿದ್ದಾರೆ.
ಇಬ್ರೂ ಪರಪ್ಪನ ಅಗ್ರಹಾರದಲ್ಲಿ ಪರಿಚಯವಾಗಿದ್ರು. ಸಣ್ಣಪುಟ್ಟ ಕೇಸ್ ಮಾಡೋದು ಬೇಡ ಮಾಡಿದ್ರೆ ಒಂದೊಳ್ಳೆ ಮನೆ ಕೊಳ್ಳೆ ಹೊಡೆಯೋಣ ಅಂತ ಸ್ಕೆಚ್ ಹಾಕಿ.ದೊಡ್ಡ ಮನೆ ಹುಡಿಕಿಕೊಂಡು ಬೈಕ್ ನಲ್ಲಿ ಟೂಲ್ಸ್ ಸಮೇತ ಕೋಲಾರ, ತುಮಕೂರು, ಹುಬ್ಬಳ್ಳಿ ಸೇರಿದಂತೆ ರಾಜ್ಯಾದ್ಯಂತ ಸುತ್ತಾಡುತ್ತಿದ್ದರು.
ಸದ್ಯ ಕಾಮಾಕ್ಷಿಪಾಳ್ಯ ಪಿಎಸ್ ಐ ಶರೀಪ್ ಅಂಡ್ ಟೀಂ ಈ ಕಳ್ಳರನ್ನು ಬಂಧಿಸಿ, ಈ ಹಿಂದೆಯೂ ಕಳ್ಳತನಮಾಡಿದ್ದ ಕೇಸ್ ನಲ್ಲಿ ಆರೋಪಿಗಳಿಂದ 5 ಲಕ್ಷ 25 ಸಾವಿರ ಮೌಲ್ಯದ 105 ಗ್ರಾಂ ಚಿನ್ನಾಭರಣವನ್ನ ಸೀಜ್ ಮಾಡಿದ್ದಾರೆ.
ಒಂದೂವರೆ ತಿಂಗಳ ಹಿಂದೆ ಜೈಲು ಸೇರಿದ್ದ ಮಂಜುನಾಥ್ ಹಾಗೂ ವೆಂಕಟೇಶ್ ಇತ್ತೀಚೆಗೆ ಬಿಡುಗಡೆಯಾಗಿದ್ದರು.ಮತ್ತೆ ಮನೆ ಕಳ್ಳತನಕ್ಕೆ ಸ್ಕೆಚ್ ಹಾಕಿ ಪೊಲೀಸರ ಕೈಯಲ್ಲಿ ಲಾಕ್ ಆಗಿದ್ದಾರೆ.
PublicNext
29/03/2022 07:49 pm