ಕೆಆರ್ ಪುರ : ವೈಟ್ ಫೀಲ್ಡ್ ವಿಭಾಗದ ಕೆಆರ್ ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಹಾಗೂ ಕಾರ್ ಗಳನ್ನು ಕದಿಯುತ್ತಿದ್ದ ನಟೋರಿಯಸ್ ಕಳ್ಳರು ಇದೀಗ ಕೆಆರ್ ಪುರ ಪೊಲೀಸರು ಅತಿಥಿಯಾಗಿದ್ದಾರೆ.
ಸುಹೇಲ್ ಅಹ್ಮದ್ ಮತ್ತು ಮೊಹಮ್ಮದ್ ಖಾಜಾ ಬಂಧಿತ ಆರೋಪಿಗಳು. ಇನ್ನು ಬಂಧಿತರಿಂದ 3 ಲಕ್ಷ ರೂ.ಬೆಲೆಬಾಳುವ 5 ದ್ವಿಚಕ್ರ ವಾಹನ ಹಾಗೂ 4 ಲಕ್ಷ ಬೆಲೆಬಾಳುವ 1 ಟಾಟಾ ಸುಮೊ ಕಾರ್ ನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳ ವಿರುದ್ದ ಹಿಂದೆ ವೈಟ್ ಫೀಲ್ಡ್, ಚಿಕ್ಕಬಳ್ಳಾಪುರ, ಬಾಗೇಪಲ್ಲಿ ಪೊಲೀಸ್ ಠಾಣೆಗಳಲ್ಲಿಯೂ ಪ್ರಕರಣ ದಾಖಲಾಗಿವೆ. ಪ್ರಕರಣ ಭೇದಿಸಿದ ಪೊಲೀಸರ ಕಾರ್ಯವನ್ನು ಡಿಸಿಪಿ ಗಿರೀಶ್ ಶಾಘ್ಲಿಸಿದ್ದಾರೆ.
PublicNext
23/03/2022 10:15 pm