ಬೆಂಗಳೂರು: ಇಂದು ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ 9 ಬಿಡಿಎ ಬ್ರೋಕರ್ ಗಳ ಪೈಕಿ ರಾಜರಾಜೇಶ್ವರಿನಗರದ ತೇಜಸ್ವಿ ಕೂಡ ಒಬ್ರು. ಈತ ಬೆಳೆದು ಬಂದ ದಾರಿ ನೋಡಿದ್ರೆ ಅಚ್ಚರಿಯಾಗುತ್ತದೆ. ಬಿಡಿಎ ಬ್ರೋಕರ್ ಆಗುವ ಮೊದಲು ತೇಜಸ್ವಿ ಶುರು ಮಾಡಿದ್ದು ಜೆರಾಕ್ಸ್ ಅಂಗಡಿ. ದ್ವಿತೀಯ ಪಿಯುಸಿ ಮುಗಿಸಿ ಜೆರಾಕ್ಸ್ ಅಂಗಡಿ ಶುರು ಮಾಡಿದ್ದ ತೇಜಸ್ವಿ ಕ್ರಮೇಣ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಶುರುಮಾಡಿದ್ದ, ಇದ್ರ ಜೊತೆಗೆ ಆಸ್ತಿ ಮತ್ತು ಸೈಟ್ ಪೇಪರ್ ರೆಡಿ ಮಾಡ್ತಿದ್ದ ತೇಜಸ್ವಿ ಬಿಡಿಎ ಲಿಂಕ್ ಬೆಳಿಸಿಕೊಂಡಿದ್ದ.
ಕೆಂಗೇರಿ ಉಪನಗರ, ಉಲ್ಲಾಳು ಮತ್ತು ವಿಶ್ವೇಶ್ವರಯ್ಯ ಲೇಔಟ್ ನಲ್ಲಿ ಹಲವು ಸೈಟ್ ಗಳನ್ನು ಡೀಲ್ ಮಾಡಿದ್ದ ತೇಜಸ್ವಿ ಕೋಟಿ ಕೋಟಿ ಒಡಯನಾಗಿದ್ದಾನೆ.ತೇಜಸ್ವಿ ಕೋಟಿ ಕೋಟಿ ಬೆಲೆಯ ಬಂಗಲೆ ಮಾಲೀಕನಾಗಿದ್ದು, ಇನ್ನು ಆರ್ ಆರ್ ನಗರದ ತೇಜಸ್ವಿ ವಾಸವಿರುವ ಬಂಗಲೆ ತಮಿಳುನಾಡಿನ ಮಾಜಿ ಮಂತ್ರಿ ಯದ್ದು.ತಮಿಳುನಾಡಿನ ಡಿಎಂಕೆಯ ಮಾಜಿ ಮಂತ್ರಿ ದಿವಂಗತ ವೀರಪಾಂಡಿಯನ್ ಆರುಮುಗಂ ಮಗಳಿಂದ ಖರೀದಿಸಿದ್ದ ಬಂಗಲೆ ಇದಾಗಿದೆ.
ಈ ಬಂಗಲೆಯನ್ನು ಸುಮಾರು 14 ಕೋಟಿಗೆ ತೇಜಸ್ವಿ ಖರೀದಿಸಿದ್ರು ಎನ್ನಲಾಗ್ತಿದೆ. ಇಷ್ಟೆಲ್ಲಾ ಆಸ್ತಿಯನ್ನೂ ಬಿಡಿಎ ಬ್ರೋಕರ್ ಆದ ಮೇಲೆಯೆ ತೇಜಸ್ವಿ ಸಂಪಾದನೆ ಮಾಡಿದ್ದು ಎಂದು ಹೇಳಲಾಗ್ತಿದೆ.
PublicNext
22/03/2022 08:00 pm