ಬೆಂಗಳೂರು: ಬಿಡಿಎ ಬ್ರೋಕರ್ ಮನೋಜ್ ಮನೆ ಮೇಲೆ ದಾಳಿ ಮಾಡಿದ ಎಸಿಬಿ ಅಧಿಕಾರಿಗಳಿಗೆ ಶಾಕ್ ಆಗಿದೆ. ಸೆಲಬ್ರೆಟಿ ರೀತಿ ಶೋಕಿ ಮಾಡ್ತಿದ್ದ ಮನೋಜ ಬಳಸ್ತಿದ್ದ ಐಶಾರಾಮಿ ಗಾಗಲ್ಸ್ ಮತ್ತು ವಾಚ್‌ಗಳ ಬೆಲೆನೇ ಲಕ್ಷ ಲಕ್ಷ ಮೌಲ್ಯ ಇದೆ. 19 ಗಾಗಲ್, ರೋಲೆಕ್ಸ್, ಫಾಸೀಲ್, ಫಾಸ್ಟ್ ಟ್ರಾಕ್ ಸೇರಿ ಹಲವು ಕಂಪನಿಯ 20 ವಾಚ್ ಗಳು ಇವೆ. ಬಂಗಾರದ ವಾಚ್‌ಗಳು ಇರುವ ಅನುಮಾನವನ್ನೂ ಎಸಿಬಿ ವ್ಯಕ್ತಪಡಿಸಿದೆ. ಮನೆಯಲ್ಲಿ ಕೇವಲ 1.5 ಲಕ್ಷ ನಗದು ಪತ್ತೆಯಾಗಿದೆ. ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳು ಪತ್ತೆಯಾಗಿದೆ. ಎಸಿಬಿ ಅಧಿಕಾರಿಗಳು ಮನೋಜ್ ಮನೆಯ ಮೂಲೆ, ಮೂಲೆ ಹುಡುಕಾಡ್ತಿದ್ದು, ಆಸ್ತಿ ಪತ್ರಗಳನ್ನ ಈಗ ಅಧಿಕಾರಿಗಳು ತಲಾಶ್ ಮಾಡ್ತಿದ್ದಾರೆ.
PublicNext
22/03/2022 12:07 pm