ಬೆಂಗಳೂರು : ನಗರದಲ್ಲಿ ಟೋಯಿಂಗ್ ಸಿಬ್ಬಂದಿ ವಿರುದ್ಧ ಪದೇ ಪದೇ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಇಂದು ಅರಮನೆ ಮೈದಾನದಲ್ಲಿ ಸಂಚಾರಿ ಪೊಲೀಸರ ಜೊತೆ ಸಂಚಾರಿ ಪೊಲೀಸ ಆಯುಕ್ತ ರವಿಕಾಂತೇಗೌಡ ಸಭೆ ನಡೆಸಿದರು.
ಇನ್ನು ಸಭೆ ಬಳಿಕ ಮಾತನಾಡಿದ ಆಯುಕ್ತರು ಕಳೆದ ಎರಡು ದಿನಗಳಲ್ಲಿ ನಡೆದ ಭೀಮಾನಗರ, ಟೋಯಿಂಗ್ ವಾಹನದ ಹಿಂದೆ ಓಡ್ತಾ ಇರುವುದು ಹಾಗೂ ಮಹಿಳೆಯೊಬ್ಬರ ಮೇಲೆ ಎ ಎಸ್ ಐ ಹಲ್ಲೆನಡೆಸಿರೋ ವಿಚಾರಕ್ಕೆ ಸಂಬಂಧಿಸಿದಂತೆ ಡಿಸಿಪಿ ನೇತೃತ್ವದಲ್ಲಿ ತನಿಖೆ ಮಾಡುವಂತೆ ಹೇಳಲಾಗಿದೆ.
ಅಬ್ರಾಹಂ ಅನ್ನೋ ಫುಡ್ ಡೆಲಿವರಿ ಬಾಯ್ ದು ವಾಹನ ಟೋಯಿಂಗ್ ಮಾಡಿದ್ರು ಅನೌನ್ಸ್ ಮಾಡಿ ಟೋಯಿಂಗ್ ಮಾಡಿದ್ದಾರೆ ಅವರು ಕೇಳಿಕೊಂಡಾಗ ಫೈನ್ ಹಾಕದೆ ವಾಹನ ಬಿಟ್ಟು ಕಳುಹಿಸಿದ್ದಾರೆ.
ಎರಡನೇ ಘಟನೆ, 24 ರಂದು ಎಸ್ ಜೆ ಪಾರ್ಕ್ ಠಾಣೆಯಲ್ಲಿ ಆಗಿರೋದು ಅತ್ಯಂತ ಅಮಾನವೀಯ ಘಟನೆ ನಮ್ಮ ಸಿಬ್ಬಂದಿಯ ವರ್ತನೆಯ ಸರಿ ಇಲ್ಲ ಅಂತ ಇಗಾಗಲೇ ಅಮಾನತು ಮಾಡಲಾಗಿದೆ.
ಇನ್ಮುಂದೆ ಇಂತಹ ಘಟನೆ ಆಗದಂತೆ ಇಂದು ಸಭೆ ಮಾಡಲಾಗಿದೆ.ಅಧಿಕಾರಿಗಳು ಸಿಬ್ಬಂದಿಗಳು ಸಾರ್ವಜನಿಕರೊಂದಿಗೆ ಸೌಜನ್ಯ ದಿಂದ ವರ್ತಿಸುವಂತೆ ಸೂಚನೆ ನೀಡಿದ್ದಾರೆ.
PublicNext
31/01/2022 07:01 pm