ಬೆಂಗಳೂರು: ಸಿಸಿಬಿ ಪೊಲೀಸರ ಬಲೆಗೆ ಬಿದ್ದ ಇಬ್ಬರು ಶಂಕಿತ ಉಗ್ರರ ಬಳಿ ಅಲ್ ಖೈದಾ ಹ್ಯಾಂಡ್ಲರ್ ನಡೆಸಿರೊ ಸಂಭಾಷಣೆ ಸಿಸಿಬಿ ತನಿಖೆಯಲ್ಲಿ ಬಯಲಾಗಿದೆ. ಶಂಕಿತ ಉಗ್ರರಾದ ಅಕ್ತರ್ ಹುಸೇನ್ ಮತ್ತು ಜುಬಾ ಜೊತೆ ಬಂಗಾಳಿ ಭಾಷೆಯಲ್ಲಿ ಅಲ್ ಖೈದಾ ಹ್ಯಾಂಡ್ಲರ್ ಒಬ್ಬ ಚಾಟ್ ನಡೆಸಿದ್ದಾನೆ. ಇಸ್ಲಾಂಗಿಂತ ದೊಡ್ಡ ಧರ್ಮವಿಲ್ಲ. ಅಲ್ಲಾಹುಗಾಗಿ ನೀವು ಎಲ್ಲದಕ್ಕು ಸಿದ್ಧರಿರಬೇಕು ಎಂದು ಯುವಕರ ತಲೆ ಕೆಡಿಸಿದ್ದ. ಕಾಶ್ಮೀರಕ್ಕೆ ಬಂದು ಅಲ್ಲಿಂದ ಆಫ್ಘಾನಿಸ್ಥಾನಕ್ಕೆ ಬನ್ನಿ ಅಂತ ಸೂಚಿಸಿದ್ದ. ಇದಕ್ಕಾಗಿ ೨ ಲಕ್ಷ ಹಣ ಹೊಂದಿಸಿಕೊಳ್ಳುವಂತೆ ಹ್ಯಾಂಡ್ಲರ್ ಸೂಚಿಸಿದ್ದ. ಇಬ್ಬರ ಬಳಿ ಹಣ ಇಲ್ಲವೆಂದಾಗ ಕಾಶ್ಮೀರಕ್ಕೆ ಬನ್ನಿ. ಅಲ್ಲಿಂದ ಪಾಕಿಸ್ತಾನ ಗಡಿಯೊಳಗೆ ಕರೆಸಿಕೊಳ್ಳುವುದಾಗಿ ಹ್ಯಾಂಡ್ಲರ್ ಹೇಳಿದ್ದ. ಮುಂದಿನ ವಾರದಲ್ಲಿ ಶಂಕಿತರು ಕಾಶ್ಮೀರಕ್ಕೆ ಹೊರಡಲು ಸಜ್ಜಾಗಿದ್ರು ಅಷ್ಟರಲ್ಲಿ ಸಿಸಿಬಿ ಬಲೆಗೆ ಬಿದ್ದಿದ್ದಾರೆ. ಇನ್ನು ಶಂಕಿತರ ಜೊತೆ ಬಂಗಾಳಿ ಭಾಷೆಯಲ್ಲಿ ಚಾಟ್ ನಡೆಸಿದ ಅಲ್ ಖೈದಾ ಹ್ಯಾಂಡ್ಲರ್ ಬಾಂಗ್ಲಾ ದೇಶದವನೆಂದು ಗುರ್ತಿಸಲಾಗಿದೆ.
ಇನ್ನೂ ಅಲ್ ಖೈದಾ ಸಂಘಟನೆ ಕಳೆದ 2016ರಿಂದ ತನ್ನ ಸಂಖ್ಯಾ ಬಲವನ್ನು ಹೆಚ್ಚಿಸಿ ಕೊಂಡಿಲ್ಲ ಇದಕ್ಕಾಗಿ ಸದಸ್ಯರ ಬಲ ಹೆಚ್ಚಿಸಿಕೊಂಡು ದೊಡ್ಡ ವಿಧ್ವಂಸಕ ಕೃತ್ಯಕ್ಕೆ ಸಜ್ಜಾಗಿದ್ರು ಎಂದು ತನಿಖೆಯಲ್ಲಿ ಮೇಲ್ನೋಟಕ್ಕೆ ಪತ್ತೆಯಾಗಿದೆ. ಇನ್ನೂ ಹೊಸ ಸದಸ್ಯರನ್ನ ಸಂಘಟನೆಗೆ ಸೇರಿಸಿಕೊಳ್ಳಲು ಕುದ್ದು ಒಸಮಾ ಬಿನ್ ಲ್ಯಾಡೆನ್ ನ ಉದಾರಹಣೆ ಕೊಟ್ಟು ಪ್ರೇರೆಪಣೆ ಕೊಡ್ತಿದ್ರಂತೆ. ಅಲ್ ಖೈದಾದಲ್ಲಿ ಜಿಹಾದಿ ತತ್ವದೊಂದಿಗೆ ಸೇರಿದ್ರೆ ಮೊದಲು ಪ್ರಮೋಷನ್ ನಲ್ಲಿ ಅಮೀರಾ ಆಗಬಹುದು ಅಮೀರಾ ಅಂದ್ರೆ ಒಂದು ಪ್ರಾಂತ್ಯದ ಮುಖ್ಯಸ್ಥ, ಈ ಸಮಯದಲ್ಲಿ ಎಕೆ 47 ಗನ್ ಕೂಡ ನಿಮ್ಮ ಕೈ ಸೇರುತ್ತೆ ಸೇನೆಯ ರೀತಿ ಸಮವಸ್ತ್ರ ಕೂಡ ಇರುತ್ತೆ ಇಲ್ಲಿಂದ ಹಂತ ಹಂತ ವಾಗಿ ನೀವು ಬೆಳೆದ್ರೆ ಒಸಮಾ ಬಿನ್‌ಲ್ಯಾಡನ್ ರೀತಿ ದೊಡ್ಡ ವ್ಯಕ್ತಿಯಾಗಿ ಇಡೀ ಪ್ರಪಂಚವನ್ನೆ ತನ್ನ ಮುಷ್ಟಿಯಲ್ಲಿ ಹಿಡಿದುಕೊಳ್ಳ ಬಹುದು ಎಂದು ಯುವಕರ ಮೈಂಡ್ ವಾಶ್ ಮಾಡ್ತಿದ್ರು ಎಂದು ತನಿಖೆಯಲ್ಲಿ ತಿಳಿದು ಬಂದಿದೆ.
Kshetra Samachara
28/07/2022 08:59 am