ಕೃಷ್ಣರಾಜಪುರ: ಬೆಂಗಳೂರು ಪೂರ್ವ ಕೃಷ್ಣರಾಜಪುರದ ಭಟ್ಟರಹಳ್ಳಿಯಲ್ಲಿ ಮನುಷ್ಯ ಅಮಾನುಷವಾಗಿ ನಡೆದುಕೊಂಡು ನಾಯಿನ್ನು ಮನಸೋ ಇಚ್ಚೇ ಥಳಿಸಿ ವಿಕೃತಿ ಮರೆದಿದ್ದಾರೆ. ಕೃಷ್ಣರಾಜಪುರ ಪೊಲೀಸ್ ಠಾಣೆ ವ್ಯಾಪ್ತಿಯ ಮಂಜುನಾಥಲೇಔಟ್ ಫಸ್ಟ್ ಮೇನ್ ಮೂರನೇ ಕ್ರಾಸ್ ವಾಸಿ ಗದ್ದಿಗೆಪ್ಪನಿಗೆ ಸೇರಿದ ನಾಯಿ ತೀವ್ರ ದಾಳಿಗೆ ಒಳಗಾದ ಮೂಕಪ್ರಾಣಿ. ಪಕ್ಕದ ಮನೆ ನಾಗರಾಜ್ ರವರ ಮೂರು ಜನ ಮಕ್ಕಳಾದ ರಾಹುಲ್, ರಚಿತ್ ಮತ್ತು ರಂಜಿತ್ ನಾಯಿನ ಮನಬಂದಂತೆ ಥಳಿಸಿರುವ ಕಿಡಿಗೇಡಿಗಳು.
ಗದ್ದಿಗೆಪ್ಪರವರು ವಾಸವಿದ್ದ ಮನೆಯ ಪಕ್ಕದ ರಸ್ತೆಯವರಾದ ನಾಗರಾಜ್ ರವರ ಮೂರು ಜನ ಮಕ್ಕಳು ದೊಣ್ಣೆಗಳಿಂದ ನಾಯಿ ಮೇಲೆ ಎರಗಿ ಮನಸೋ ಇಚ್ಚೆ ಥಳಿಸಿದ್ದಾರೆ. ನಾಗರಾಜ್ ರವರ ನಾಯಿಯನ್ನು ಗದ್ದಿಗೆಪ್ಪರವರ ನಾಯಿ ಬೊಗಳಿ-ಕಚ್ಚಿದೆ ಎಂಬ ಆರೋಪದ ಹಿನ್ನಲೆಯಲ್ಲಿ ನೆನ್ನೆ ರಾತ್ರಿ 10ಗಂಟೆ ಸುಮಾರಿಗೆ ತೀವ್ರ ದಾಳಿ ನಡೆದಿದೆ.
ದಾಳಿತ ತೀವ್ರತೆಗೆ ಗದ್ದಿಗೆಪ್ಪ ರವರ ನಾಯಿಯ ತಲೆಗೆ ತೀವ್ರಗಾಯಗಳಾಗಿವೆ. ಕಣ್ಣುಗುಡ್ಡೆಯಿಂದ ಮಾಂಸ ಹೊರಬಂದಿದ್ದು, ನಾಯಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದೆ. ಬದುಕುವ ಸಾಧ್ಯತೆ ತೀರ ಕಡಿಮೆ ಎನ್ನಲಾಗ್ತಿದೆ. ದುರಂತ ಘಟನೆ ಹಿನ್ನಲೆ ಮೊದಲ ಹಲ್ಲೆಗೊಳಗಾದ ಗದಿಗೆಪ್ಪ ಈಗ ರಾಹುಲ್, ರಚಿತ್ ಮತ್ತು ರಂಜಿತ್ ವಿರುದ್ಧ ಕೆ.ಆರ್. ಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಕೃಷ್ಣರಾಜಪುರ..
PublicNext
04/10/2022 05:59 pm