ಬೆಂಗಳೂರು : ಫುಡ್ ಡೆಲಿವರಿ ಯುವಕನ ಮೇಲೆ ಯುವತಿಯೊಬ್ಬಳು ಚಪ್ಪಲಿಯಿಂದ ಹೊಡೆದಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಆನ್ ಲೈನ್ ಫುಡ್ ಡಿಲೆವರಿ ಯುವಕನ ಮೇಲೆ ಯುವತಿ ಚಪ್ಪಲಿ ನಿಂದ ಹೊಡೆದಿರುವ ದೃಶ್ಯ ಈಗ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಯುವತಿ ಯಾವ ಕಾರಣಕ್ಕೆ ಫುಡ್ ಡೆಲಿವರಿ ಯುವಕನ ಮೇಲೆ ಹಲ್ಲೆ ಮಾಡಿದಳು ಎಂದು ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಈ ಘಟನೆ ಬೆಂಗಳೂರಿನ ಕೋರಮಂಗಲದಲ್ಲಿ ನಡೆದಿದೆ.
ಆದರೆ ಆನ್ ಲೈನ್ ಫುಡ್ ಡೆಲಿವರಿ ಯುವಕರು ಯುವತಿಯ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಯುವತಿ ಆರ್ಡರನ್ನು ತಪ್ಪಾಗಿ ಪಡೆದಿರುತ್ತಾರೆ ಆಗ ಡಿಲಿವರಿ ಯುವಕ ಯುವತಿಗೆ ಇದು ನಿಮ್ಮ ಆಡರ್ ಅಲ್ಲ ಎಂದು ಹೇಳಿದ್ದಕ್ಕೆ ಗುಡ್ಡ ಡಿಲಿವರಿ ಯುವಕನ ಮೇಲೆ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾಳೆ ಎಂದು ಆರೋಪ ಮಾಡುತ್ತಿದ್ದಾರೆ.
ಸದ್ಯ ಸಾಮಾಜಿಕ ತಾಣದಲ್ಲಿ ಯುವತಿಯ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ ಘಟನೆ ಏನಾದರೂ ಆಗರಲಿ ಯುವತಿ ದಿನನಿತ್ಯ ಕಷ್ಟಪಟ್ಟು ಮನೆ ಮನೆಗೆ ಊಟ ತಲುಪಿಸುವ ಯುವಕನ ಮೇಲೆ ಚಪ್ಪಲಿ ನಿಂದ ಹಲ್ಲೆ ಮಾಡಿರುವುದು ಖಂಡನೀಯ
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
24/08/2022 06:29 pm