ದೊಡ್ಡಬಳ್ಳಾಪುರ: ದಲಿತರ ಕೇರಿಯಿಂದ ಹರಿದು ಬರುವ ಚರಂಡಿ ನೀರು ಗ್ರಾಮದ ಮೂಲಕ ಹಾದು ಹೋಗುತ್ತೆ. ಆದರೆ ಗ್ರಾಮದಲ್ಲಿನ ಕೆಲವು ವ್ಯಕ್ತಿಗಳು ದಲಿತರ ಕೇರಿಯಿಂದ ಬರುವ ಚರಂಡಿ ನೀರು ನಮ್ಮ ಮನೆಗಳ ಮೂಲಕ ಹಾದು ಹೋಗಬಾರದೆಂದು ಚರಂಡಿಗೆ ತಡೆಯನ್ನ ಹಾಕಿದ್ದಾರೆ. ಪರಿಣಾಮ ನಿನ್ನೆ ರಾತ್ರಿ ಸುರಿದ ಮಳೆ ನೀರು ಸರಗವಾಗಿ ಹರಿದು ಹೋಗಲು ಸಾಧ್ಯವಾಗದೆ ಹಿಮ್ಮುಖವಾಗಿ ಹರಿದು ತಗ್ಗು ಪ್ರದೇಶದಲ್ಲಿನ ಮನೆಗಳಿಗೆ ನುಗ್ಗಿದೆ. ಆನಂದ್ ಎಂಬುವರ ಚಿಲ್ಲರೆ ಅಂಗಡಿಗೆ ಮಳೆ ನೀರು ನುಗ್ಗಿ ಅಂಗಡಿಯಲ್ಲಿದ್ದ ದಿನಸಿ ಸಾಮಗ್ರಿಗಳು ನೀರು ಪಾಲಾಗಿದೆ. ರಮ್ಯಾ ಎಂಬುವರ ಮನೆಗೆ ಮಳೆ ನೀರು ನುಗ್ಗಿ ಮನೆಯಲ್ಲಿದ್ದ ರಾಗಿ ಮೂಟೆಗಳು ಸಹ ನೀರು ಪಾಲಾಗಿದೆ. ಮಳೆ ನೀರಿನಿಂದ ರಕ್ಷಣೆ ಪಡೆಯಲು ಬಾಗಿಲಿಗೆ ತಡೆಗೋಡೆಯನ್ನ ಕಟ್ಟಿಕೊಂಡಿದ್ದಾರೆ. ಆದರೆ ಇದರಿಂದಲೂ ಸಹ ಯಾವುದೇ ಪ್ರಯೋಜನವಾಗಿಲ್ಲ.
ಹೊಸಹಳ್ಳಿ ಗ್ರಾಮ ಪಂಚಾಯತ್ ಅಧಿಕಾರಿ ನಾಗರಾಜ್ ಮತ್ತು ಪಂಚಯಾತ್ ಅಧ್ಯಕ್ಷ ವೆಂಕಟೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚರಂಡಿ ಮೇಲೆ ಸೌದೆಗಳನ್ನ ಇಟ್ಟುಕೊಂಡಿರುವರಿಗೆ ಪಂಚಾಯತಿಯಿಂದ ನೋಟೀಸ್ ಕಳಿಸಲಾಗುವುದು. ನೋಟೀಸ್‌ಗೂ ಬಗ್ಗದ ಜನರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುವುದ್ದಾಗಿ ಹೇಳಿದರು.
ಸ್ವಚ್ಛ ಭಾರತ್ ಹೆಸರಿನಲ್ಲಿ ಗ್ರಾಮ ಪಂಚಾಯತ್‌ಗಳಿಗೆ ಕೋಟಿ ಕೋಟಿ ಹಣ ಬರುತ್ತಿದೆ. ಆದರೆ ಅದರ ಸದ್ಬಳಕೆಯಾಗುತ್ತಿಲ್ಲ ಮತ್ತು ನಮ್ಮ ಗ್ರಾಮದ ಸ್ವಚ್ಛತೆ ನಮ್ಮ ಹೊಣೆ ಎಂಬ ಹರಿವು ಗ್ರಾಮಸ್ಥರಿಗೆ ಬರುವ ತನಕ ಗ್ರಾಮಗಳಲ್ಲಿ ಇಂತಹ ಸಮಸ್ಯೆಗಳು ಸಾಮಾನ್ಯವಾಗಿರುತ್ತವೆ.
Kshetra Samachara
20/05/2022 01:30 pm