ಬೆಂಗಳೂರು: ನಗರದಲ್ಲಿ ಕೆಲವೆಡೆ ಪಾದಚಾರಿಗಳಿಗೆ ಸುಗಮವಾಗಲಿ ಎಂದು ಫುಟ್ ಪಾತ್ ಅಚ್ಚುಕಟ್ಟಾಗಿ ನಿರ್ಮಿಸಿ ನಡೆದಾಡಲು ಅನುವು ಮಾಡಿಕೊಡಲಾಗಿದೆ. ಆದ್ರೆ, ಈ ಫುಟ್ ಪಾತ್ನ್ನು ಬಿಡದೆ ಕೆಲ ಟೂವೀಲರ್ಗಳು ಫುಟ್ ಪಾತ್ ಮೇಲೆಯೇ ಸವಾರಿ ಮಾಡ್ತವೆ. ಇದನ್ನ ತಪ್ಪಿಸೋಕೆ ಫುಟ್ ಪಾತ್ ನಡುವಿಗೆ ಕಂಬ ಅಳವಡಿಕೆ ಮಾಡಿದ್ರು. ಈಗ ಅದಕ್ಕೂ ಕಳ್ಳರ ಕಾಟ ಶುರುವಾಗಿದೆ. ಬನಶಂಕರಿಯ ಕೆ.ಆರ್. ರೋಡ್ನಲ್ಲಿ ಕಳ್ಳರು ಫುಟ್ ಪಾತ್ ಕಂಬಗಳಿಗೂ ಕನ್ನ ಹಾಕಿದ್ದಾರೆ!
ಈಗಾಗಲೇ ನಗರದಾದ್ಯಂತ ಸ್ಮಾರ್ಟ್ ಸಿಟಿ ಪ್ರಾಜೆಕ್ಟ್ನಡಿ ಫುಟ್ ಪಾತ್ಗಳನ್ನ ನಿರ್ಮಾಣ ಮಾಡಿ ಅದಕ್ಕೆ ನಡುಗಂಬಗಳನ್ನ ನೆಡಲಾಗ್ತಿದೆ. ಅದನ್ನೇ ಟಾರ್ಗೆಟ್ ಮಾಡಿರುವ ಕಳ್ಳರು ದಿನವಿಡೀ ತಿರುಗಾಡಿ ಜಾಗವನ್ನ ಗುರುತಿಟ್ಟುಕೊಂಡು ರಾತ್ರಿ ವೇಳೆ ಫುಟ್ ಪಾತ್ ಧ್ವಂಸಗೊಳಿಸಿ ಕಂಬಗಳನ್ನ ಕದಿಯುತ್ತಾರೆ.
ರಾತ್ರಿ ವೇಳೆ ಆಟೋದಲ್ಲಿ ಬರುವ ಖದೀಮರು ಕಂಬಗಳನ್ನ ಕಿತ್ತು ಪರಾರಿಯಾಗಿದ್ದಾರೆ. ಬಹುತೇಕ ನಗರದ ಸಿಸಿ ಟಿವಿಗಳನ್ನ ಅಬ್ಸರ್ವ್ ಮಾಡಿದರೆ ಇದೇ ರೀತಿಯ ಕುಕೃತ್ಯಗಳು ಬಯಲಿಗೆ ಬರುವ ಸಾಧ್ಯತೆ ಇದೆ. ಕಳ್ಳತನ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಆಟೋ ನಂಬರ್ ಕೂಡ ಗೊತ್ತಾಗಿದೆ.
ಇನ್ನು, ಬಹುತೇಕ ಇಂತಹ ಘಟನೆಗಳು ಸಂಬಂಧಪಟ್ಟ ಇಲಾಖೆ ಗಮನಕ್ಕೆ ಬರೋದಿಲ್ಲ. ಒಂದು ಬಾರಿ ಕೆಲಸ ಮುಗಿದರೆ ಅತ್ತ ಸುಳಿಯದ ಅಧಿಕಾರಿಗಳು ಮತ್ತೊಂದಷ್ಟು ಏರಿಯಾಗಳಲ್ಲಿ ಸರ್ವೆ ಮಾಡಿ ಕೃತ್ಯದ ಬಗ್ಗೆ ಗಮನ ಹರಿಸಬೇಕಿದೆ. ಈ ಬಗ್ಗೆ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
PublicNext
18/09/2022 08:57 pm