ಬೆಂಗಳೂರು: ಭಾರತ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವಕ್ಕೆ ತೆರೆಬಿದ್ದು 10- 12 ದಿನಗಳೇ ಕಳೆದು ಹೋದವು.. ಭಾರತದ ಪ್ರತಿ ಪ್ರಜೆ ಕೂಡಾ ಅತ್ಯಂತ ಶ್ರದ್ಧಾಭಕ್ತಿಗಳಿಂದ ಸ್ವಾತಂತ್ರ್ಯೋತ್ಸವವನ್ನು ಆಚರಿಸಿದ್ರು ಪ್ರಧಾನಿ ನರೇಂದ್ರ ಮೋದಿಯವರು ಕರೆಕೊಟ್ಟ ಹರ್ ಘರ್ ತಿರಂಗಾ ಅಭಿಯಾನದಡಿ ತಮ್ಮ ಮನೆಮನೆಗಳ ಮೇಲೆ ತಿರಂಗಾ ಹಾರಿಸಿ ಸಂಭ್ರಮ ಪಟ್ಟರು..
ಎಲ್ಲೆಲ್ಲೂ ಕೇಸರಿ ಬಿಳಿ ಹಸಿರು ಧ್ವಜದ್ದೇ ಅಬ್ಬರ... ಹೊಸ ಧ್ಬಜ ಸಂಹಿತೆ ಪ್ರಕಾರ ಆಗಷ್ಟ್ 13 ರಂದು ಧ್ವಜವನ್ನು ಆರೋಹಣ ಮಾಡಿ ಆಗಷ್ಟ್ 15 ರ ಸಾಯಂಕಾಲ ಕೆಳಗಿಳಿಸ ಬೇಕಿತ್ತು.. ಹಾಗಂತ ಸರ್ಕಾರ ಕೂಡಾ ತಿಳಿಸಿತ್ತು.. ಆದರೆ ನಮ್ಮ ಧ್ವಜ ಹಾರಿಸುವಾಗ ಇದ್ದ ಉಮ್ಮೇದಿ ಒಂದೆರಡು ದಿನ ಕಳೆಯುವಷ್ಟರಲ್ಲಿ ಜರ್ರನೆ ಇಳಿದು ಹೋಯ್ತು...
ಯಾವ ಗೌರವದಿಂದ ಧ್ವಜವನ್ನು ಹಾರಿಸಿದ್ದರೋ ಅದೇ ಗೌರವದಿಂದ ಯಾರೂ ಧ್ವಜವನ್ನು ಇಳಿಸಲು ಆಸಕ್ತಿ ತೋರಲೇ ಇಲ್ಲಾ.. ಪರಿಣಾಮ?? ಸ್ವಾತಂತ್ರ್ಯೋತ್ಸವ ಮುಗಿದು ಗಣೇಶೋತ್ಸವ ಬಂದ್ರೂ ಇನ್ನೂ ಧ್ವಜಗಳು ಹಾರಾಡುತ್ತಲೇ ಇವೆ.. ಅನೇಕ ಧ್ವಜಗಳು ಮಳೆ, ಬಿಸಿಲು, ಧೂಳಿನ ಹೊಡೆತಕ್ಕೆ ಸಿಕ್ಕಿ ಅತ್ಯಂತ ಶೋಚನೀಯ ಸ್ಥಿತಿ ತಲುಪಿವೆ..
ರಾಷ್ಟ್ರಧ್ವಜಕ್ಕೆ ಈ ರೀತಿ ಅವಮಾನವಾಗುತ್ತಿದ್ದರೆ ಅದನ್ನು ತಡೆಯಲು ಯಾರೂ ಮುಂದಾಗುತ್ತಿಲ್ಲ.. ಸರ್ಕಾರವೂ ಇದರ ಬಗ್ಗೆ ತಲೆಯನ್ನೇ ಕೆಡಿಸಿಕೊಳ್ಳುತ್ತಿಲ್ಲ... ಈ ಸಂದರ್ಭದಲ್ಲಿ ಪಬ್ಲಿಕ್ ನೆಕ್ಸ್ಟ್ ಅನೇಕ ಸ್ಥಳಗಳಿಗೆ ತೆರಳಿ ಜನರಲ್ಲಿ ಮನವಿ ಮಾಡಿ ಧ್ವಜವನ್ನು ಇಳಿಸಿ ಸಂರಕ್ಷಿಸುವ ಕಾರ್ಯವನ್ನು ಆರಂಭಿಸಿದೆ..
ಆದರೂ ರಾಷ್ಟ್ರಧ್ವಜ ಕ್ಕೆ ಈ ರೀತಿ ಅವಮಾನ ಆಗುತ್ತಿರುವುದನ್ನು ನೋಡಿದ್ರೆ ಮನಸ್ಸಿಗೆ ತೀರಾ ಖೇದ ವೆನಿಸುತ್ತದೆ.. ಇದು ಆತ್ಮಾವಲೋಕನದ ಸಂದರ್ಭ.. ಭಾರತೀಯರೆಲ್ಲರೂ ಒಟ್ಟಾಗಿ ನಮ್ಮ ಹೆಮ್ಮೆಯ ತಿರಂಗಾ ವನ್ನು ಸಂರಕ್ಷಿಸ ಬೇಕಿದೆ...
ಪರಾಮರ್ಶೆ--- ಪ್ರವೀಣ್ ನಾರಾಯಣ ರಾವ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು..
PublicNext
25/08/2022 08:32 pm