ಬೆಂಗಳೂರು: ಬೇಲಿಯೇ ಎದ್ದು ಹೊಲ ಮೇಯ್ದ ಕಥೆ ಇದು. ಸೂಲಿಬೆಲೆ ಪೊಲೀಸ್ ಠಾಣೆ ಪಿಎಸ್ಐ ರಮೇಶ್ ಗುಗ್ಗರಿ ವಿರುದ್ಧ ಪತ್ನಿ ರಾಶಿ ದೌರ್ಜನ್ಯದ ದೂರು ದಾಖಲಿಸಿದ್ದಾರೆ. PSI ರಮೇಶ್ ಅಪರಿಚಿತರನ್ನು ತಂದೆ- ತಾಯಿ ಎಂದು ಪರಿಚಯಿಸಿ 2021ರಲ್ಲಿ ರಾಶಿ ಎಂಬವರನ್ನು ಮದುವೆ ಆಗಿದ್ದರು. ಮದುವೆ ನಂತರ ಪಿಎಸ್ಐ ತಂದೆಯೇ ಹಲ್ಲೆ ಮಾಡಿದ್ದಾರೆ. ಮಾಂಗಲ್ಯ ಕಿತ್ತು ಬಿಸಾಕಿ ದೌರ್ಜನ್ಯ ಎಸಗಿದ್ದಾರೆ ಎಂದು ರಾಶಿ ದೂರಿನಲ್ಲಿ ತಿಳಿಸಿದ್ದಾರೆ.
ಈಗಾಗಲೇ ಪಿಎಸ್ಐ ರಮೇಶ್ ಗೆ ಮದುವೆ ಆಗಿದೆ. ನೀವು ಹೇಗೆ ಮದುವೆಯಾದ್ರಿ? ಎಂದು ಅಪರಿಚಿತರಿಂದ ಪೋನ್ ಮೂಲಕ PSI ಬೆದರಿಕೆ ಹಾಕಿಸಿದ್ದಾರೆ ಎನ್ನಲಾಗ್ತಿದೆ. ಜ್ವರ ಬಂದಾಗ ಯಾವ್ದೋ ಟ್ಯಾಬ್ಲೆಟ್ ನೀಡಿ ಮನೆಲಿ ಬಲವಂತವಾಗಿ ಕೂಡಿ ಹಾಕಿ ಗರ್ಭಪಾತ ಮಾಡಿಸಿದ್ದಾರೆ ಎಂದು ರಾಶಿ ದೂರಿನಲ್ಲಿ ಆರೋಪಿಸಿದ್ದಾರೆ.
ವಕೀಲರ ಮೂಲಕ ವಿಚ್ಛೇದನಕ್ಕೆ ಸಹಿ ಹಾಕುವಂತೆ ಬೆದರಿಕೆ ಹಾಕಲಾಗಿದೆ. ರೌಡಿಗಳನ್ನು ಬಿಟ್ಟು ತೊಂದರೆ ನೀಡುವುದಾಗಿ ಬೆದರಿಕೆ ಬಂದಿದೆ. ಮನೆಯಲ್ಲಿ ಕೂಡಿ ಹಾಕಿ ಮಾನಸಿಕ, ದೈಹಿಕವಾಗಿ ಹಲ್ಲೆ ಮಾಡಿದ್ದಾರೆ ಎಂದು ಪತ್ನಿ ರಾಶಿ, ಸೂಲಿಬೆಲೆ ಪೊಲೀಸರಿಗೆ ದೂರು ನೀಡಿದ್ದಾರೆ.
ರಾಶಿ ದೂರಿನನ್ವಯ ಸೂಲಿಬೆಲೆ ಪೊಲೀಸರು FIR ದಾಖಲಿಸಿದ್ದಾರೆ. ಎಲ್ಲರ ರಕ್ಷಕನಾಗಬೇಕಿದ್ದ ಪೊಲೀಸಪ್ಪ ಮದುವೆ ಆಗಿದ್ದರೂ, ಮರೆಮಾಚಿ ಮದುವೆಯಾಗಿರುವುದು ತಪ್ಪು. ಈ ಪ್ರಕರಣದಲ್ಲಿ ನಿಜವಾಗಲೂ ಪತ್ನಿ ರಾಶಿಗೆ ನ್ಯಾಯ ಸಿಗುತ್ತಾ !? ಹಿರಿಯ ಪೊಲೀಸ್ ಅಧಿಕಾರಿಗಳು PSI ರಮೇಶ್ ಮೇಲೆ ಕಾನೂನು ಕ್ರಮ ಜರುಗಿಸುತ್ತಾರಾ.!? ಕಾದು ನೋಡೋಣ.
ಪಿಎಸ್ ಐ ಪರಾರಿ: ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆಯೇ ಇದೀಗ PSI ರಮೇಶ್ ನಾಪತ್ತೆಯಾಗಿದ್ದಾರೆ. "ಪೊಲೀಸ್ ಇಲಾಖೆಯ ಘನತೆಗೆ ಧಕ್ಕೆಯಾಗಲಿದೆ. ಆದ್ದರಿಂದ ರಜೆಯ ಮೇಲೆ ತೆರಳಿ" ಎಂದು ಹಿರಿಯ ಪೊಲೀಸ್ ಅಧಿಕಾರಿಗಳೇ PSI ರಮೇಶ್ ರನ್ನು ಕಳುಹಿಸಿದ್ದಾರೆ ಎನ್ನಲಾಗ್ತಿದೆ.
ಮೂಲತಃ ಬೆಂಗಳೂರಿನವರಾದ ರಾಶಿಯವರನ್ನು ಕೆಲವು ದಿನ PSI ರಮೇಶ್ ಬಾಡಿಗೆ ಮನೆ ಮಾಡಿ ಸೂಲಿಬೆಲೆಯಲ್ಲಿ ಇರಿಸಿದ್ದರು. ಈಗ ದೂರು ನೀಡಿ ಬೆಂಗಳೂರಿನಲ್ಲಿ ಹೆಂಡತಿ ರಾಶಿ ವಾಸವಿದ್ದಾರೆ. ಕಾನೂನು ಕಾಯಬೇಕಿದ್ದ ʼಪಿಎಸ್ ಐ ಭೂಪʼ ಈಗ ಪೇಚಿಗೆ ಸಿಲುಕಿ ನಾಪತ್ತೆಯಾಗಿರುವುದು ನಾಚಿಕೆಗೇಡಿನ ವಿಷಯವೇ ಸರಿ.
Kshetra Samachara
09/06/2022 12:34 pm