ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆನೇಕಲ್: ರಾಜಕಾಲುವೆ ಒತ್ತುವರಿ- ರಸ್ತೆಗಿಳಿದ ಸಂಘಟನೆಗಳು ಊರಿನ ಗ್ರಾಮಸ್ಥರು

ಆನೇಕಲ್: ಇತ್ತೀಚಿಗೆ ಭೂಗಳ್ಳರು ಸರ್ಕಾರಿ ಜಾಗಗಳ‌ಮೇಲೆ ಕಣ್ಣು ಹಾಕಿದ್ದಾರೆ. ಅದಲ್ಲದೇ ರಾತ್ರೋರಾತ್ರಿ ಕಾಂಪೌಂಡ್ ಹಾಕಿ ಮಾರಟ ಮಾಡುತ್ತಿದ್ದಾರೆ. ಆದರೆ ಇನ್ನೊಂದು ಕಡೆ ಸರ್ಕಾರಿ ಸ್ವಾಮ್ಯದ ರಾಜಕಾಲುವೆ ಹಾಗೂ ಕರಾಬು ಜಾಗವನ್ನು ಅಕ್ರಮವಾಗಿ ರಸ್ತೆ ನಿರ್ಮಾಣ ಮಾಡಿಕೊಂಡಿದ್ದಲ್ಲದೇ ರಾಜಾರೋಷವಾಗಿ ಓಡಾಡುತ್ತಿದ್ದಾರೆ. ಹೀಗಾಗಿ ಖಾಸಗಿ ಬಡಾವಣೆ ವಿರುದ್ಧ ಬಿಎಸ್‌ಪಿ ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ಮಾಡಿದ್ದಾರೆ.

ಹೌದು. ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಸರ್ಜಾಪುರ ಹೋಬಳಿಯ ಮುತ್ತಾ ನಲ್ಲೂರು ಗ್ರಾಮ ಪಂಚಾಯಿತಿ ಸರ್ಕಾರಿ ಸ್ವಾಮ್ಯದ ರಾಜಕಾಲುವೆ ಒತ್ತುವರಿಯಾಗಿದೆ. ಇಲ್ಲಿನ ಸರ್ವೇ ನಂಬರ್ 125/1, 125/2, 126/2, 126/3, 231/6ರಲ್ಲಿ 9 ಎಕರೆ 31 ಗುಂಟೆ ಸರ್ಕಾರಿ ಜಾಗವಾಗಿ ಮಹೀಧರ್ ಪ್ರಾಜೆಕ್ಟ್ ಕಂಪನಿ ಸರ್ಕಾರಿ ರಾಜಕಾಲುವೆ ಮತ್ತು ಕರಾಬು ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಮಹಿಧರ್ ಪ್ರಾಜೆಕ್ಟ್ ಕಂಪನಿ ವಿರುದ್ಧ ಬಿಎಸ್‌ಪಿ ಪಕ್ಷದ ತಾಲೂಕು ಅಧ್ಯಕ್ಷ ಚಿನ್ನಪ್ಪ ನೇತೃತ್ವದಲ್ಲಿ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಇಲ್ಲ ಅಂತ ಸಾರ್ವಜನಿಕರು ಕಿಡಿಕಾರಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

01/02/2022 07:17 pm

Cinque Terre

2.39 K

Cinque Terre

0

ಸಂಬಂಧಿತ ಸುದ್ದಿ