ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗಾಂಜಾ ದಂಧೆಗಿಳಿದ್ದ ಕುಖ್ಯಾತ ರೌಡಿ ಶೀಟರ್ ಗಳು ಪೊಲೀಸ್ರ ಬಲೆಗೆ

ಬೆಂಗಳೂರ: ರೌಡಿಸಂನಲ್ಲಿ ವರ್ಕೌಟ್ ಆಗ್ತಿಲ್ಲ ಅಂತ ಹೊರರಾಜ್ಯದಿಂದ ಗಾಂಜಾ ತಂದು ಮಾರಾಟ ಮಾಡ್ತಿದ್ದ ಡಿಜೆ ಹಳ್ಳಿ ಹಾಗು ಆರ್ ಟಿ ನಗರ ರೌಡಿ ಶೀಟರ್ ಗಳನ್ನ ಮಾದನಾಯಕನಹಳ್ಳಿ ಪೊಲೀಸ್ರು ಬಂಧಿಸಿದ್ದಾರೆ.

ಆರೋಪಿಗಳಿಂದ ಅರವತ್ತು ಕೆಜಿ ಗಾಂಜಾ ವಶಕ್ಕೆಪಡೆದಿದ್ದು, ಆರೋಪಿಗಳು ಈ ಹಿಂದೆ ಹಲವು ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ರು ಎನ್ನಲಾಗಿದೆ. ಇರ್ಫಾನ್ ಖಾನ್, ಸೈಯದ್ ನೂರ್ ಅಫ್ಜಲ್ ಖಾನ್ ಬಂಧಿತ ಆರೋಪಿಗಳಾಗಿದ್ದು ಆರೋಪಿ ಇರ್ಫಾನ್ ಈ ಹಿಂದೆ ಡಿಜೆ ಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಅಫಘಾತ ಪ್ರಕರಣದಲ್ಲಿ ಸೇನಾ ವಾಹನಕ್ಕೆ ಬೆಂಕಿ ಹಾಕಿದ್ದ.

ನೆಲಮಂಗಲ ಮಾದನಾಯಕನಹಳ್ಳಿ ಹೈವೆಗಳಲ್ಲಿ ಲಾರಿ ಮತ್ತು ಟ್ರಕ್ ಚಾಲಕರಿಗೆ ಗಾಂಜಾ ಮಾರಾಟ ಮಾಡ್ತಿದ್ರು.

Edited By : Somashekar
PublicNext

PublicNext

06/07/2022 04:16 pm

Cinque Terre

37.84 K

Cinque Terre

0

ಸಂಬಂಧಿತ ಸುದ್ದಿ