ಬೆಂಗಳೂರು: ಜಿಲ್ಲಾ ರಿಜಿಸ್ಟ್ರಾರ್ ಮಧುಸೂದನ್ ಮನೆ ಮೇಲೆ ದಾಳಿ ನಡೆಸಿರೋ ಎಸಿಬಿ ಅಧಿಕಾರಿಗಳೇ ಮನೆಯಲ್ಲಿರೋ ಚಿನ್ನಾಭರಣ ಕಂಡು ಶಾಕ್ ಆಗಿದ್ದಾರೆ. 22 ಜನ ಅಧಿಕಾರಿಗಳು ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ದಾಳಿ ನಡೆದಿದೆ.
ಮಧುಸೂದನ್‌ಗೆ ಸೇರಿದ ರಾಜಾಜಿನಗರ ಮನೆ ಬಸವೇಶ್ವರನಗರ ಮನೆ ಸೇರಿ ಮೂರು ಕಡೆ ದಾಳಿ ನಡೆಸಿದ್ದಾರೆ. ಮನೆಯಲ್ಲಿ 39 ಲಕ್ಷಕ್ಕೂ ಅಧಿಕ ನಗದು ಹಣ ಪತ್ತೆಯಾಗಿದೆ. ಮತ್ತು 2.3 ಕೆ.ಜಿ ಚಿನ್ನ ಹಾಗೂ 4.9ಕೆ.ಜಿ ಬೆಳ್ಳಿ ವಸ್ತುಗಳು ಪತ್ತೆಯಾಗಿದ್ದು. ಅಪಾರ ಪ್ರಮಾಣದ ಆಸ್ತಿ ಪತ್ರಗಳು ಹಾಗೂ ಬ್ಯಾಂಕ್ ಪಾಸ್ ಬುಕ್‌ಗಳು ಕೂಡ ಸಿಕ್ಕಿವೆ.
PublicNext
17/06/2022 03:19 pm