ಬೆಂಗಳೂರು: ACB ದಾಳಿಯ ವೇಳೆ ಕೋಟಿ - ಕೋಟಿ ಅಕ್ರಮ ಆಸ್ತಿ ಸಂಪಾದನೆಯ ಆರೋಪ ಎದುರಿಸುತ್ತಿರುವ ಬಿಬಿಎಂಪಿ ನೌಕರ ಮಾಯಣ್ಣ ಅಮಾನತುಗೊಂಡಿದ್ದಾರೆ.
ಬಿಬಿಎಂಪಿ ಆಡಳಿತ ವಿಭಾಗದ ಉಪ ಆಯುಕ್ತರ ಕಚೇರಿಯಿಂದ ಅಮಾನತು ಆದೇಶ ಹೊರಡಿಸಲಾಗಿದೆ.
ಬಿಬಿಎಂಪಿ ರಸ್ತೆ ಮೂಲಭೂತ ಸೌಕರ್ಯ ವಿಭಾಗದಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕೆಲಸ ಮಾಡುತ್ತಿರುವ ಮಾಯಣ್ಣ ಕಳೆದ ತಿಂಗಳು 24 ರಂದು ಮನೆ ಹಾಗು ಕಚೇರಿ ಮೇಲೆ ದಾಳಿ ಮತ್ತು ತಪಾಸಣೆ ನಡೆಸಿದಾಗ ಅಪಾರ ಪ್ರಮಾಣದ ಅಕ್ರಮ ಆಸ್ತಿ ಪತ್ತೆಯಾಗಿತ್ತು.
5 ಕೋಟಿ 39 ಲಕ್ಷದ ಆಸ್ತಿಯನ್ನು 32 ಲಕ್ಷದಷ್ಟು ಖರ್ಚು 5 ಕೋಟಿ 71 ಲಕ್ಷದ 11 ಸಾವಿರದಷ್ಟು ಒಟ್ಟು ಆಸ್ತಿ ಮತ್ತು ಖರ್ಚನ್ನು ಹಾಗು 2 ಕೋಟಿ 20 ಲಕ್ಷದಷ್ಟು ಆದಾಯ ಹೊಂದಿ ರುವುದಾಗಿ ಅಂದಾಜಿಸಲಾಗಿತ್ತು.
ಆದರೆ ಆಪಾದಿತನ ಮನೆಯಲ್ಲಿ 3 ಕೋಟಿ 51 ಲಕ್ಷದ 11 ಸಾವಿರದಷ್ಟು ಹೆಚ್ಚುವರಿ ಆಸ್ತಿ ಪತ್ತೆಯಾಗಿತ್ತು.
ಇದು ಶೇ,159ಕ್ಕಿಂತ ಹೆಚ್ಚು ಎಂದು ಹೇಳಲಾಗಿತ್ತು.ಅಕ್ರಮ ಆಸ್ತಿಸಂಪಾದನೆ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದ್ದ ಹಿನ್ನಲೆಯಲ್ಲಿ ಹುದ್ದೆಯಲ್ಲಿ ಮುಂದುವರೆದಿದ್ದೇ ಆದಲ್ಲಿ ತನ್ನ ವಿರುದ್ದ ಇರುವ ಆರೋಪಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ತಿದ್ದುವ ಅಥವಾ ನಾಶ ಪಡಿಸುವ ಆತಂಕ ಇರುವ ಹಿನ್ನಲೆಯಲ್ಲಿ ತತ್ ಕ್ಷಣಕ್ಕೆ ಜಾರಿಗೆ ಬರುವಂತೆ ಮಾಯಣ್ಣ ಅವರನ್ನು ಅಮಾನತುಮಾಡಿ ಆದೇಶ ಹೊರಡಿಸಲಾಗಿದೆ.
Kshetra Samachara
08/12/2021 10:41 pm