ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಿರ್ಜನ ಪ್ರದೇಶದಲ್ಲಿ ಓಡಾಡುವವರೇ ಖದೀಮರ ಟಾರ್ಗೆಟ್; ಮೊಬೈಲ್ ಕದಿಯುತ್ತಿದ್ದ ಇಬ್ಬರು ಕಳ್ಳರು ಅರೆಸ್ಟ್

ಸಿಸಿಬಿ ಅಧಿಕಾರಿಗಳು ಭರ್ಜರಿಯಾದ ಕಾರ್ಯಾಚರಣೆ ನಡೆಸಿ ಮೊಬೈಲ್ ರಾಬರಿ ಮತ್ತು ಪಿಕ್ ಪಾಕೆಟ್ ಮಾಡ್ತಿದ್ದ ಜಾಲವನ್ನ ಪತ್ತೆ ಹಚ್ಚಿದ್ದಾರೆ. ಇತ್ತೀಚೆಗೆ ನಗರದಲ್ಲಿ ಹೆಚ್ಚಾಗುತ್ತಿದ್ದ ಮೊಬೈಲ್ ಸ್ನ್ಯಾಚರ್ಸ್ ಬೆನ್ನು ಬಿದ್ದ ಸಿಸಿಬಿ, ಇಬ್ಬರನ್ನ ಬಂಧಿಸಿ 78 ಲಕ್ಷ ಮೌಲ್ಯದ 515 ಮೊಬೈಲ್ ಗಳನ್ನ ವಶಕ್ಕೆ ಪಡೆದಿದ್ದಾರೆ.

ಅಫ್ಝಲ್ ಪಾಷಾ ಹಾಗು ಇಝಾರ್ ಎಂಬಿಬ್ಬರನ್ನ ಬಂಧಿಸಿರುವ ಪೊಲೀಸರು ಅವರ ಕೃತ್ಯಗಳ ಬಗ್ಗೆ ಮತ್ತಷ್ಟು ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಈ ಇಬ್ಬರು ಆರೋಪಿಗಳು ನಗರದಲ್ಲಿ ಮೊಬೈಲ್ ಗಳನ್ನ ದೋಚಿ ನಂತರ ಅದನ್ನ ಹೈದರಾಬಾದ್, ಮುಂಬೈ ಸೇರಿದಂತೆ ಹಲವೆಡೆ ಮಾರಾಟ ಮಾಡ್ತಿದ್ದರು. ಜೆಜೆ ಆರ್ ನಗರ ಮೂಲದ ಆರೋಪಿಗಳು ನಗರದಾದ್ಯಂತ ಮೊಬೈಲ್ ರಾಬರಿ ನಡೆಸಿ ಹೊರರಾಜ್ಯಗಳಿಗೆ ಮಾರಾಟ ಮಾಡ್ತಿದ್ರು.

ನಿರ್ಜನ ಪ್ರದೇಶದಲ್ಲಿ ಓಡಾಡುವ ವ್ಯಕ್ತಿಗಳನ್ನೇ ಟಾರ್ಗೆಟ್ ಮಾಡುವ ಆರೋಪಿಗಳು ಅವರ ಮೊಬೈಲ್ ಗಳನ್ನ ಕಸಿಯುತ್ತಿದ್ದರು. ಅವರೇನಾದ್ರೂ ವಿರೋಧ ವ್ಯಕ್ತಪಡಿಸಿದರೆ ಅವರ ಮೇಲೆ ಹಲ್ಲೆಯನ್ನ ನಡೆಸುತ್ತಿದ್ರು ಎನ್ನಲಾಗಿದೆ. ಆರೋಪಿಗಳು ಇನ್ನೂ ಏಳೆಂಟು ಹುಡುಗರ ಗ್ಯಾಂಗ್ ನೊಂದಿಗೆ ಕಾರ್ಯಾಚರಣೆಗೆ ಇಳಿದು ಮೊಬೈಲ್ ನ ದೋಚುತ್ತಿದ್ದರು ಎನ್ನಲಾಗಿದೆ.

ಚಾಮರಾಜಪೇಟೆ ,ಉಪ್ಪಾರಪೇಟೆ, ಮಾಗಡಿ ರಸ್ತೆ ,ವೈಟ್ ಫೀಲ್ಡ್ ಸೇರಿದಂತೆ ಬಹುತೇಕ ಕಡೆ ಇವರ ಮೇಲೆ ಪ್ರಕರಣಗಳಿವೆ.‌ ಇನ್ನು ಇದೇ ವೇಳೆ ಮಾತನಾಡಿದ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ , ಬಹುತೇಕ‌ ಜನರು ಮೊಬೈಲ್ ಕಳ್ಳತನವಾದರೆ ದೂರನ್ನ ನೀಡೋದಿಲ್ಲ .ಈಗ ನಮಗೆ 515 ಮೊಬೈಲ್ ಸಿಕ್ಕಿದೆ. ಆದರೆ 300 ರ ಆಸುಪಾಸಿನ ಪ್ರಕರಣಗಳು ಮಾತ್ರ ಬೆಳಕಿಗೆ ಬಂದಿದೆ. ಹೀಗಾಗಿ ದೂರು ನೀಡದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದಿದ್ದಾರೆ.

Edited By :
PublicNext

PublicNext

11/08/2022 03:36 pm

Cinque Terre

22.84 K

Cinque Terre

2

ಸಂಬಂಧಿತ ಸುದ್ದಿ