ಬೆಂಗಳೂರು : ಬೆಂಗಳೂರು ವಿವಿಯಲ್ಲಿ ವಿದ್ಯಾರ್ಥಿಗಳ ಫಲಿತಾಂಶ ನೀಡುವಲ್ಲಿ ಆದ ಎಡವಟ್ಟು ಸೇರಿದಂತೆ ಹಾಸ್ಟೆಲ್ ಸಮಸ್ಯ, ವಿದ್ಯಾರ್ಥಿ ವೇತನ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಕಳೆದ ಮೂರು ದಿನಗಳಿಂದ ವಿದ್ಯಾರ್ಥಿಗಳು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದರು.
ಇಂದಿನ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ವಿವಿಗೆ ಮುತ್ತಿಗೆ ಹಾಕಲು ಮುಂದಾದಾಗ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಈ ವೇಳೆ ವಿದ್ಯಾರ್ಥಿನಿಯೋರ್ವಳು ಲಾಠಿ ಏಟಿನಿಂದ ಆಸ್ಪತ್ರೆ ಪಾಲಾಗಿದ್ದಳು. ಸದ್ಯ ಸ್ವಲ್ಪ ಸುಧಾರಿಸಿಕೊಂಡ ವಿದ್ಯಾರ್ಥಿ ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದ್ದಾರೆ.
PublicNext
31/01/2022 03:40 pm