ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು ಡಿಸಿ ವಿರುದ್ಧ ಅಸಭ್ಯ ವರ್ತನೆ ಆರೋಪ

ವರದಿ - ಗಣೇಶ್ ಹೆಗಡೆ

ಬೆಂಗಳೂರು -ಶಾಲಾ ಶುಲ್ಕ ನಿಗದಿ ಸಂಬಂಧ ಜಿಲ್ಲಾ ಸಮಿತಿ ಯಾವುದೇ ಕ್ರಮ ತೆಗೆದು ಕೊಳ್ಳದನ್ನು ಪ್ರಶ್ನಿಸಿದ ಪೋಷಕರ ಮೇಲೆ ಅಸಭ್ಯ ವರ್ತಿಸಿದ ಆರೋಪ ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ ರವರ ಮೇಲೆ ಕೇಳಿ ಬಂದಿದೆ.

ಈ ಸಂಬಂಧ ಪೋಷಕರು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿ ಸಿದ್ದಾರೆ.

ಹೆಚ್ಚಿನ ಮೊತ್ತಕ್ಕೆ ಬೇಡಿಕೆ ಇಡುತ್ತಿರುವ ಖಾಸಗಿ ಶಾಲೆಯ ಅಡಳಿತ ಮಂಡಳಿಯ ವಿರುದ್ಧ ಜಿ.ರವಿ ಕುಮಾರ್,ಲಕ್ಷ್ಮಿ ನಾರಾಯಣ, ಡಾ.ಅರಣು ಕುಮಾರ್, ಬೆಂಗಳೂರು ನಗರ ಜಿಲ್ಲೆ ಶಿಕ್ಷಣ ನಿಯಂತ್ರಣ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದ್ದರು.

ಇದಕ್ಕೆ ಅಧ್ಯಕ್ಷರಾಗಿರುವ ಹಾಗೂ ಬೆಂಗಳೂರು ಡಿಸಿ ಜೆ.ಮಂಜುನಾಥ್ ರವರು ಜಿಲ್ಲಾ ಸಮಿತಿಯ ಸಭೆಯಲ್ಲಿ ಪೋಷಕರ‌‌ ಮೇಲೆ ಹೇಯ್ ಸುಮ್ನೆ ಕೂತ್ಕೊಳಯ್ಯ.ಎಷ್ಟು ಮಾತನಾಡ್ತೀಯ. ಡಿಪಾರ್ಟ್‌ಮೆಂಟ್ ನಿಂದು ? ನಿಂಗೆ ಬಿಟ್ಟಿ ಎಜುಕೇಶನ್

ಬೇಕಾ ? ಫೀಸು ಕಟ್ಟೋಕೆ ಅಗಲ್ವ ? ಎಂತಾ ಪೇರೆಂಟ್ಸ್ ನೀವು ? ಈ ರೀತಿಯ ಪದ ಬಳಕೆ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ಈ ದೂರನ್ನ ಗಂಭೀರವಾಗಿ ಪರಿಗಣಿಸಿದೆ.

Edited By :
Kshetra Samachara

Kshetra Samachara

22/11/2021 07:43 pm

Cinque Terre

280

Cinque Terre

0

ಸಂಬಂಧಿತ ಸುದ್ದಿ