ಯಲಹಂಕ : ಸ್ಯಾಂಡಲ್ ವುಡ್ ನಟ ಚಂದನ್ ಬಿರಿಯಾನಿ ಅಂಗಡಿಯ ಶೆಟರ್ ಮುರಿದ ಕಳ್ಳರು ಹಣ ಕದ್ದು ಪರಾರಿಗಿದ್ದಾರೆ.
ಇನ್ನು ಕೊಡಿಗೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಲಿರುವ ನಟ ಚಂದನ್ ಅವರಿಗೆ ಸೇರಿದ ಬಿರಿಯಾನಿ ಸೆಂಟರ್‌ನಲ್ಲಿ ಶುಕ್ರವಾರ ರಾತ್ರಿ ಈ ಕೃತ್ಯ ನಡೆದಿದಿದ್ದು, 50ಸಾವಿರ ನಗದು ದೋಚಿ ಖದೀಮರು ಎಸ್ಕೇಪ್ ಆಗಿದ್ದಾರೆ.
ಇನ್ನು ಚಂದನ್ ಅವರ ಬಿರಿಯಾನಿ ಸೆಂಟರ್ ಜೊತೆಗೆ ಬೇರೆಯವರ ಅಂಗಡಿಯಲ್ಲೂ ಕಳ್ಳತನವಾಗಿದ್ದು ಈ ಸಂಬಂಧ ಚಂದನ್ ಅವರು ಕೊಡಿಗೇಹಳ್ಳಿ ಪೊಲೀಸರಿಗೆ ದೂರು ನೀಡಿ, ಕಾನೂನು ಕ್ರಮ ಜರುಗಿಸುವಂತೆ ಕೋರಿದ್ದಾರೆ.
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಯಲಹಂಕ..
PublicNext
28/08/2022 09:17 am