ಬೆಂಗಳೂರು:ಪುನೀತ್ ರಾಜಕುಮಾರ್ ನೇತ್ರದಾನ ಮಾಡಿ ಸಾರ್ಥಕತೆ ಮೆರೆದು ಹೋಗಿದ್ದಾರೆ. ಆದರೆ ಆನೇಕಲ್ ನ ಅಪ್ಪು ಅಭಿಮಾನಿಯೊಬ್ಬ ಅಪ್ಪು ಅಂತ್ಯಕ್ರಿಯೆ ಬಳಿಕ ಮನೆಗೆ ಬಂದು ಅಪ್ಪು ನೇತ್ರದಾನದ ಬಗ್ಗೆ ಕೊಂಡಾಡಿದ್ದಾನೆ. ನನ್ನ ಕಣ್ಣುಗಳನ್ನೂ ದಾನ ಮಾಡಿ ಅಂತ ತನ್ನ ತಾಯಿಗೂ ಹೇಳಿ ಕೆಲವೇ ಕ್ಷಣದಲ್ಲಿಯೇ ನೇಣುಬಿಗಿದುಕೊಂಡು ಜೀವ ಬಿಟ್ಟಿದ್ದಾನೆ. ಮುಂದೇನ್ ಆಯಿತು ಅಂತ ಹೇಳ್ತೀವಿ ನೋಡಿ.
ಅಪ್ಪು ಅಭಿಮಾನಿಯ ಹೆಸರು ರಾಜೇಂದ್ರ. ಈತ ಅಪ್ಪು ಅಪ್ಪಟ ಅಭಿಮಾನಿ. ಆನೇಕಲ್ ವ್ಯಾಪ್ತಿಯಲ್ಲಿಯೇ ಶ್ಯಾನುಭೋಗನಹಳ್ಳಿ ವಾಸಿ. ಒಂದು ವರ್ಷದ ಹಿಂದಷ್ಟೆ ಮದುವೆ ಆಗಿದ್ದ. ನಿನ್ನೆ ಪುನೀತ್ ಅಂತ್ಯಕ್ರಿಯೆ ಮುಗಿಸಿ ಮನೆಗೆ ಬಂದಿದ್ದಾನೆ. ಅದೇ ನೋವಿನಲ್ಲಿಯೆ ತನ್ನ ತಾಯಿಗೂ ಪುನೀತ್ ನೇತ್ರದಾನದ ಕುರಿತು ಹೇಳಿಕೊಂಡಿದ್ದಾನೆ. ತಕ್ಷಣವೇ ಮನೆಯಲ್ಲಿಯೇ ನೇಣುಬಿಗಿದುಕೊಂಡಿದ್ದಾನೆ. ರಾಜೇಂದ್ರನ ಆಸೆಯಂತೆ ಮನೆಯವರು ನೇತ್ರದಾನ ಮಾಡಿದ್ದಾರಂತೆ. ಈ ಪ್ರಕರಣ ಈಗ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ದಾಖಲೆ ಆಗಿದೆ.
Kshetra Samachara
01/11/2021 05:06 pm