ಬೆಂಗಳೂರು : ಕೆಜಿಎಫ್ 2 ಚಿತ್ರದಲ್ಲಿ ಚಿಕ್ಕ ಪಾತ್ರದಲ್ಲಿ ಗುರ್ತಿಸಿಕೊಂಡಿದ್ದ ಸತೀಶ್ ಅವರನ್ನು ಸೂರ್ಯ ನಗರ ಎರಡನೇ ಹಂತ ಮಾಲೀಕರ ಸಂಘದ ವತಿಯಿಂದ ಸರಳವಾಗಿ ಸನ್ಮಾನ ಮಾಡಿ ಗೌರವಿಸಲಾಯಿತು. ಅನಂತನಾಗ್ ಬಳಿಕ ಪ್ರಕಾಶ್ ರಾಜ್ ಲೈಬ್ರರಿಯಲ್ಲಿ ವಿಚಾರಣೆ ಮಾಡುವ ಸನ್ನಿವೇಶದಲ್ಲಿ ಸತೀಶ್ ಪಾತ್ರವನ್ನು ಮಾಡಿದ್ದಾರೆ.
ಇನ್ನು ಸೂರ್ಯನಗರ ಎರಡನೇ ಹಂತದ ಮಾಲಿಕರ ಸಂಘದ ಅಧ್ಯಕ್ಷ ರಾಜಶೇಖರ್ ಮಾತನಾಡಿ , ನಮ್ಮ ಭಾಗದ ಕಲಾವಿದನೊಬ್ಬರು ಕನ್ನಡ ಚಿತ್ರರಂಗದ ಬಿಗ್ ಬಜೆಟ್ ಫಿಲಂ ಕೆಜಿಎಫ್ 2 ಚಿತ್ರದಲ್ಲಿ ನಟನೆ ಮಾಡಿದ್ದು ಖುಷಿ ತಂದಿದೆ ಹಾಗಾಗಿ ಅವರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು ಎಂದು ತಿಳಿಸಿದರು.
PublicNext
15/04/2022 05:32 pm