ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅಪ್ಪು ಪ್ರತಿಮೆ ಅನಾವರಣ; ಆದಿತ್ಯನಗರ ಅಭಿಮಾನಿಗಳ ಅದಮ್ಯ ಪ್ರೀತಿಯ ತೋರಣ

ಯಲಹಂಕ: ಪುನೀತ್ ಅಂದ್ರೆ ಯಾರಿಗೆ ಇಷ್ಟ ಆಗಲ್ಲ ಹೇಳಿ. ಯುವಕರು, ಮಕ್ಕಳು, ಮಹಿಳೆಯರು, ಹಿರಿಯರಿಗೂ ಅಪ್ಪು ಎಂದರೆ ಅಚ್ಚುಮೆಚ್ಚು. ಅಪ್ಪು ಹುಟ್ಟುಹಬ್ಬ ಪ್ರಯುಕ್ತ ಯಲಹಂಕ ಆದಿತ್ಯನಗರದ ಜನರು, ಪುನೀತ್ ರ ಪುತ್ಥಳಿ ನಿರ್ಮಿಸಿ ತಮ್ಮ ಅಭಿಮಾನ ತೋರಿದ್ದಾರೆ.

ಬೆಂಗಳೂರು ಉತ್ತರ ಯಲಹಂಕದ ಆದಿತ್ಯನಗರದ ಸ್ನೇಹ ಕನ್ನಡ ಯುವಕರ ಸಂಘ ಪುನೀತ್ ಮೇಲಿನ ಪ್ರೀತಿಯಿಂದ ಅವರಷ್ಟೇ ಎತ್ತರದ ಪುತ್ಥಳಿಯನ್ನು ಯಲಹಂಕ M.S.ಪಾಳ್ಯ ಮುಖ್ಯ ರಸ್ತೆಲಿ ನಿರ್ಮಿಸಿದ್ದಾರೆ. ಜೊತೆಗೆ ಗಣೇಶ ದೇವರ ವಿಗ್ರಹ ಪ್ರತಿಷ್ಠಾಪಿಸಿದ್ದಾರೆ. ಅನ್ನದಾನ, ಅಂಧರ ಹಾಡುಗಾರಿಕೆ ಮತ್ತು ಆದಿತ್ಯನಗರದ ಪ್ರತಿ ಮನೆಯಿಂದ ದೀಪ ಬೆಳಗುವ ಕಾರ್ಯಕ್ರಮ‌ ಹಮ್ಮಿಕೊಂಡಿದ್ದಾರೆ.

ಪುನೀತ್ ನಮ್ಮನ್ನಗಲಿ 4 ತಿಂಗಳಾಗಿದ್ದರೂ ಅದನ್ನ ಯಾರಿಗೂ ಅರಗಿಸಿಕೊಳ್ಳಲು ಆಗ್ತಿಲ್ಲ. ಅದರಲ್ಲೂ ಮಹಿಳೆಯರಿಗೆ ಪುನೀತ್ ಕಂಡರೆ ಎಲ್ಲಿಲ್ಲದ ಅಭಿಮಾನ. ಇನ್ನು ಮಕ್ಕಳೆಂದರೆ ಅಪ್ಪುಗೆ ಪ್ರಾಣ. ಹಾಗಾಗಿಯೆ ಮಕ್ಕಳಿಗಾಗಿ ಶಾಲೆ, ವಯಸ್ಸಾದವರಿಗೆ ವೃದ್ಧಾಶ್ರಮ, ಜಾನುವಾರುಗಳಿಗೆ ಗೋಶಾಲೆ ಕಟ್ಟಿ ಸಮಾಜಮುಖಿಯಾಗಿದ್ದರು. ಇನ್ನು ಪುನೀತ್ ಹುಟ್ಟುಹಬ್ಬ ತವರಿನ‌ ಹಬ್ಬದಂತೆ ಅಂತಾರೆ ಹೆಣ್ಣುಮಕ್ಕಳು.

ಎದೆಯಂತಾರಾಳದಲಿ ಅಡಗಿರುವ ಪ್ರೀತಿಗೆ ಬೆಲೆ ಕಟ್ಟಲಾಗದು. ಅದೇ ಪುನೀತ್ ಎಂಬ ಮಾಣಿಕ್ಯ ಸಹ. ಇಂದು ಪುನೀತ್ ಹುಟ್ಟುಹಬ್ಬ ನಾಡಿನ ಮನೆ ಮನೆಯ ಹಬ್ಬದಂತಾಗಿರುವುದು ಅವರ ಮೇಲಿನ ಪ್ರೀತಿ- ಅಭಿಮಾನಕ್ಕೆ ಸಾಕ್ಷಿ.

SureshBabu. Public Next ಬೆಂಗಳೂರು

Edited By : Manjunath H D
Kshetra Samachara

Kshetra Samachara

17/03/2022 11:07 pm

Cinque Terre

2.53 K

Cinque Terre

0

ಸಂಬಂಧಿತ ಸುದ್ದಿ