ಬೆಂಗಳೂರು: ಅಭಿಮಾನಿಗಳ ಕಣ್ಮಣಿ ಅಪ್ಪುವಿಗೆ ವೃದ್ಧೆಯೊಬ್ಬರು ಚುರುಮರಿ ಹಾಗೂ ಕೆಂಪು ಬತ್ತಾಸಿನ ಮಾಲೆ ಮಾಡಿಕೊಂಡು ತಂದಿದ್ದಾರೆ. ಸಮಾಧಿ ಬಳಿ ಬಂದ ಅಜ್ಜಿ ಅಪ್ಪು ಅವರ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕು ಮರಾಠಿಪಾಳ್ಯದಿಂದ ಆಗಮಿಸಿರುವ ಸುಮಿತ್ರಾಬಾಯಿ ಎಂಬ ಈ ಅಜ್ಜಿ, ಅಪ್ಪು ಅಂದ್ರೆ ನನಗಿಷ್ಟ ಎಂದು ಹೇಳಿಕೊಂಡಿದ್ದಾರೆ. 40 ಎಳೆ ದಾರದಿಂದ15 ದಿನಗಳ ಕಾಲ ನಿರಂತರವಾಗಿ ಪೋಣಿಸಿರುವ ಹಾರವನ್ನು ಅಪ್ಪು ಸಮಾಧಿಗೆ ಹಾಕಲು ತಂದಿದ್ದಾರೆ. ನನ್ನ ಕಷ್ಟಗಳನ್ನ ಹೇಳಿಕೊಳ್ಳಬೇಕೆಂದಿದ್ದೆ. ಆದ್ರೆ ಈ ರೀತಿ ಆಗಿರೋದು ನನಗೆ ತುಂಬಾ ನೋವು ತಂದಿದೆ. ಅಪ್ಪು ಇದ್ದಾಗ ನನ್ನನ್ನು ಮನೆಗೆ ಕರೆದುಕೊಂಡು ಹೋಗಿದ್ದರು. ಅಶ್ವಿನಿ
PublicNext
17/03/2022 03:07 pm