ಬೆಂಗಳೂರು: ಬೈಟು ಲವ್ ಸಿನಿಮಾದ ಟ್ರೈಲರ್ ಲಾಂಚ್ ವೇಳೆ ಸ್ಯಾಂಡಲ್‌ವುಡ್ ನಟಿ ಶ್ರೀಲೀಲಾ ತೀವ್ರ ಇರಿಸು-ಮುರಿಸು ಅನುಭವಿಸಿದ್ದಾರೆ.
ಒರಾಯನ್ ಮಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ನುಗ್ಗಿದ ಪಡ್ಡೆ ಹುಡುಗರು ಶ್ರೀಲೀಲಾ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ ತಮ್ಮ ಸುತ್ತಲೂ ಕಿಕ್ಕಿರಿದು ಸುತ್ತುವರೆದಿದ್ದ ಯುವಕರನ್ನು ಕಂಡು ನಟಿ ಶ್ರೀಲೀಲಾ ತೀವ್ರ ಇರಿಸು-ಮುರಿಸು ಅನುಭವಿಸಿದ್ದಾರೆ. ಕೆಲಕಾಲ ಅಭಿಮಾನಿ ಹುಡುಗರ ಗುಂಪಿನಿಂದ ಹೊರಬರಲಾಗದೇ ಪರದಾಡಿದ ಪ್ರಸಂಗವೂ ನಡೆಯಿತು.
PublicNext
13/02/2022 09:35 pm