ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಗಲ್ರಾನಿಗೆ ಮಿಡ್ ನೈಟ್ ಮಿಸ್ಡ್‌ ಕಾಲ್ ಕಾಟ

ಬೆಂಗಳೂರು: ಸ್ಯಾಂಡಲ್‌ವುಡ್‌ ನಟಿ ಸಂಜನಾ ಗಲ್ರಾನಿಗೆ ಈಗ ಮಿಡ್ ನೈಟ್ ಮಿಸ್ಡ್ ಕಾಲ್ ಕಾಟ ಶುರುವಾಗಿದೆ.

ತಾನು ಕ್ಯಾಬ್ ಡ್ರೈವರ್ ಬೆಂಗಳೂರು ಮೂಲದ ವ್ಯಕ್ತಿ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ಸಂಜನಾ ಗಲ್ರಾನಿಗೆ ಕಾಟ ಕೊಟ್ಟಿದ್ದಾನೆ. 'ನಿತ್ಯ ನಮಗೆ ಇದೇ ರಗಳೆಯಾಗಿದೆ. ಯಾಕೆ ಮಧ್ಯರಾತ್ರಿ 1:27ಕ್ಕೆ ಕರೆ ಮಾಡಿದ್ರೀ? ಯಾರು ನೀವು? ನಿಮ್ಮ ಡಿಎಲ್, ವೆಹಿಕಲ್ ನಂಬರ್ ಕಳಿಸಿ' ಎಂದು ಸಂಜನಾ ಗದರಿದಾಗ ಗಾಬರಿಗೊಂಡ ವ್ಯಕ್ತಿ ಕ್ಷಮೆ ಕೇಳಿ ಕಾಲ್ ಕಟ್ ಮಾಡಿದ್ದಾನೆ.

ಈ ಹಿಂದೆ ಸಂಜನಾ ಗಲ್ರಾನಿ ಜೊತೆ ಕ್ಯಾಬ್ ಚಾಲಕನೊಬ್ಬ ಕ್ಯಾತೆ ತೆಗೆದಿದ್ದ. ಹೀಗಾಗಿ ಕ್ಯಾಬ್ ಚಾಲಕರು ಸಂಜನಾ ಗಲ್ರಾನಿಗೆ ಈ ರೀತಿ ಹಾವಳಿ ಕೊಡುತ್ತಿದ್ದಾರಾ ಎಂಬ ಅನುಮಾನಗಳು ಮೂಡಿದೆ. ಸದ್ಯ ಸಂಜನಾ ಹಾಗೂ ಮಿಡ್ ನೈಟ್ ಮಿಸ್ಡ್ ಕಾಲ್ ಕೊಟ್ಟಿದ್ದ ವ್ಯಕ್ತಿಯ ಆಡಿಯೋ ಪಬ್ಲಿಕ್ ನೆಕ್ಸ್ಟ್‌ಗೆ ಲಭ್ಯವಾಗಿದೆ.

Edited By : Nagesh Gaonkar
PublicNext

PublicNext

13/02/2022 05:52 pm

Cinque Terre

38.05 K

Cinque Terre

0

ಸಂಬಂಧಿತ ಸುದ್ದಿ