ಇಂದು ಬೆಂಗಳೂರಿಗೆ ತಮಿಳು ನಟ ವಿಕ್ರಮ್ ತಮ್ಮ ಚಿತ್ರ ಕೋಬ್ರಾ ಪ್ರಚಾರಕ್ಕೆ ಬಂದಿದ್ದರು. ತಮ್ಮ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು. ಬೆಂಗಳೂರಿನ ಖಾಸಗಿ ಮಾಲ್ ನಲ್ಲಿ ನಡೆದ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಚಿತ್ರದ ನಟಿ ಶ್ರೀನಿಧಿ ಶೆಟ್ಟಿ ಕೂಡ ಭಾಗಿಯಾಗಿದ್ದರು. ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ತಮಿಳು ನಟ ವಿಕ್ರಮ್ ಚಿತ್ರದ ಬಗ್ಗೆ ಮಾತನಾಡಿದರು.
ಚಿತ್ರದ ಪ್ರಚಾರದ ವೇಳೆ ಅಪ್ಪು ನೆನೆದು ಭಾವುಕರಾದ ನಟ ವಿಕ್ರಮ್. ಹಳೆ ನೆನಪುಗಳನ್ನು ನೆನೆದು ಭಾವುಕರಾದರು ಬೆಂಗಳೂರಿಗೆ ಬಂದಾಗಲೆಲ್ಲಾ ನನಗೆ ಅಪ್ಪುವಿನ ನೆನಪು ಕಾಡುವುದು ಎಂದು ಮಾತನಾಡಿದರು. ಮತ್ತು ಚಿತ್ರದ ಬಗ್ಗೆ ಮಾತನಾಡಿ ಕೋಬ್ರಾ ಚಿತ್ರದಲ್ಲಿ ಹಲವು ಅವತಾರಗಳಲ್ಲಿ ನಟ ವಿಕ್ರಮ್ ಅನ್ನು ನೋಡಬಹುದು. ಶ್ರೀನಿಧಿ ಶೆಟ್ಟಿ ಒಂದೇ ದಿನದಲ್ಲಿ ಚಿತ್ರದ ಕನ್ನಡ ಡಬ್ಬಿಂಗ್ ಮಾಡಿದ್ದು ಚಿತ್ರ ಚೆನ್ನಾಗಿ ಬಂದಿದೆ ಪ್ರೇಕ್ಷಕರು ಥಿಯೇಟರ್ಗಳಲ್ಲಿ ಹೋಗಿ ಸಿನಿಮಾ ನೋಡುವಂತೆ ನಟ ವಿಕ್ರಮ್ ಹೇಳಿದರು.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
27/08/2022 08:35 pm