ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: 100ನೇಸ್ವಾತಂತ್ರ್ಯೋತ್ಸವಕ್ಕೆ ಭಾರತವನ್ನು ಶ್ರೇಷ್ಠ ದೇಶವನ್ನಾಗಿ ಕಟ್ಟೋಣ:- ರಮೇಶ್ ಅರವಿಂದ್

ಬೆಂಗಳೂರು: ದೇಶ ಅಂದರೆ ನಾವು ನೀವೆಲ್ಲಾ ಸೇರಿ ಆಗಿರುವಂತದ್ದು. ಈಗ ನಾವೆಲ್ಲಾ 75ನೇ ವರ್ಷದ ಸಂಭ್ರಮದಲ್ಲಿ ಇದ್ದೇವೆ. ಇದರ ಅಂಗವಾಗಿ ಯಲಹಂಕದ ರೇವಾ ಯುನಿವರ್ಸಿಟಿಲಿ ಅಮೃತ ಮಹೋತ್ಸವ ಅಂಗವಾಗಿ ಕಾಲೇಜಿನ ವಿದ್ಯಾರ್ಥಿಗಳಿಗೆ ತಿರಂಗಾ ವಿತರಿಸಲಾಯ್ತು.

ಇದೇ ವೇಳೆ ಮಾತನಾಡಿದ ನಟ ರಮೇಶ್ ಅರವಿಂದ ಇನ್ನು ನೂರು ವರ್ಷಕ್ಕೆ ನೀವು ಶ್ರೇಷ್ಠ ಕೆಲಸ ಮಾಡಿ ಭಾರತ ದೇಶವನ್ನು ವಿಶ್ವಕ್ಕೆ ಗ್ರೇಟ್ ದೇಶವನ್ನಾಗಿ ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಇನ್ನು ರೇವಾ ಕಾಲೇಜ್ ಪರಿಸರ ಸಂರಕ್ಷಣೆಗೆ ವನಮಹೋತ್ಸವ ಹೆಸರಲ್ಲಿ ಈ ವರ್ಷ 16000 ಗಿಡ ನೆಡುವ ಮೂಲಕ ಹಸಿರು ಕ್ರಾಂತಿಗೂ ಕಾರಣವಾಗಿದೆ. ಪ್ಲಾಂಟೇಷನ್ ಡ್ರೈವ್ ಹೆಸರಲ್ಲಿ ವಿದ್ಯಾರ್ಥಿ ಕಾಲೇಜಿಗೆ ಅಡ್ಮಿಷನ್ ಆದಾಗಲೇ ಗಿಡನೆಡಬೇಕು. ಅದರ ಪಾಲನೆ ಪೋಷಣೆಗೆ ಪ್ರತ್ಯೇಕ App ಇದೆ. ಅದರಲ್ಲಿ ಎಲ್ಲಾ ಡೀಟೇಲ್ಸ್ ಸಿಗುತ್ತವೆ. ಈ ರೀತಿ ಕೆಲಸ ನಗರ & ರಾಜ್ಯ,ದೇಶದೆಲ್ಲೆಡೆ ಆಗಬೇಕೆಂದು ರಮೇಶ್ ತಿಳಿಸಿದರು. ಇದೇ ವೇಳೆ ರೇವಾ ಕಾಲೇಜ್ ಕುಲಾಧಿಪತಿ ಡಾ.ಶ್ಯಾಮರಾಜು, ಸಿಬ್ಬಂದಿ ಮತ್ತು ಸಾವಿರಾರು ಜನ ವಿದ್ಯಾರ್ಥಿಗಳು ಅಮೃತ ಮಹೋತ್ಸವ ಮತ್ತು ವನ ಮಹೋತ್ಸವಕ್ಕೆ ಸಾಕ್ಷಿಯಾದರು.

Edited By : Manjunath H D
Kshetra Samachara

Kshetra Samachara

14/08/2022 11:09 am

Cinque Terre

2.87 K

Cinque Terre

0

ಸಂಬಂಧಿತ ಸುದ್ದಿ