ಬೆಂಗಳೂರು: ಹಾಸ್ಯ ನಟಿ ಶೂಟಿಂಗ್ ಮುಗಿಸಿ ಮನೆಗೆ ತೆರಳುವಾಗ ಅಪಘಾತ ಸಂಭವಿಸಿದೆ. ಬಸವನಗುಡಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಹಾಸ್ಯ ನಟಿ ಸುನೇತ್ರಾಗೆ ಆ್ಯಕ್ಸಿಡೆಂಟ್ ಆಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎನ್ ಆರ್ ಕಾಲೋನಿ ಮುಖ್ಯ ರಸ್ತೆಯಲ್ಲಿ ಘಟನೆ ನಡೆದಿದೆ.
ನಿನ್ನೆ ತಡರಾತ್ರಿ ಶೂಟಿಂಗ್ ಮುಗಿಸಿಕೊಂಡು ಸ್ಕೂಟರ್ ನಲ್ಲಿ ಮನೆಗೆ ಹೋಗ್ತಿದ್ದ ಸುನೇತ್ರ ರಸ್ತೆಯಲ್ಲಿದ್ದ ಅವೈಜ್ಞಾನಿಕ ಹಂಪ್ ಕಾಣದೆ ಸ್ಕೂಟರ್ ಜಂಪ್ ಆಗಿ ಕೆಳಗೆ ಬಿದ್ದಿದ್ದಾರೆ. ಹೆಲ್ಮೆಟ್ ಹಾಕಿದ್ದ ಪರಿಣಾಮ ತಲೆಗೆ ಸ್ವಲ್ಪ ಪೆಟ್ಟಾಗಿದ್ದು, ಸಣ್ಣ ಪುಟ್ಟ ಗಾಯಗಳಿಂದ ಬಚಾವ್ ಆಗಿದ್ದಾರೆ. ಹಂಪ್ ಜಂಪ್ ಮಾಡಿ ಸೈಡ್‌ನಲ್ಲಿದ್ದ ಮಣ್ಣು ಮುಚ್ಚಿದ ರಸ್ತೆಗುಂಡಿಗೆ ಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ಸಹಾಯಕ್ಕೆ ಧಾವಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
PublicNext
08/05/2022 10:17 am