ವರದಿ:ಗಣೇಶ್ ಹೆಗಡೆ
ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ 24 ಗಂಟೆ ಹೋಟೆಲ್ , ಬೇಕರಿ, ಸ್ವೀಟ್ ಸ್ಟಾಲ್ಗಳು ಹಾಗೂ ಐಸ್ ಕ್ರೀಮ್ ಶಾಪ್ಪಬ್ ,ರೆಸ್ಟೋರೆಂಟ್ ಗಳು ತೆರೆಯಲು ಸರ್ಕಾರ ಅನುಮತಿ ನೀಡಿದೆ. ಇದಕ್ಕೆ ರೆಸಿಡೆಂಟ್ ವೆಲ್ ಪೇರ್ ಅಸೋಸಿಯೇಷನ್ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಹೋಟೆಲ್ ,ಪಬ್ ಗಳಿಂದ ರಾತ್ರಿ ನಿದ್ದೆ ಮಾಡಲು ಆಗ್ತಿಲ್ಲ. ಮಧ್ಯರಾತ್ರಿವರೆಗೂ ತೆರೆದಿರುತ್ತೆ. ಗಲಾಟೆಯಿಂದ ನಿದ್ದೆಗೆ ತೊಂದರೆ ಆಗಲಿದೆ. ಅಲ್ಲದೆ ರಾತ್ರಿ ಹೊತ್ತು ಮಹಿಳೆಯರು ಓಡಾಡಲು ಸಾಕಷ್ಟು ಭಯ ಆಗಲಿದೆ. ಹೀಗಾಗಿ ರಾಜ್ಯ ಸರ್ಕಾರ ತಮ್ಮ ಆದೇಶ ಹಿಂಪಡೆಯ ಬೇಕೆಂದು ಒತ್ತಾಯಿಸಿವೆ.
ಕೆಲ ದಿನಗಳ ಹಿಂದೆ ರಾಜ್ಯ ಕಾರ್ಮಿಕ ಇಲಾಖೆ ಇದೇ ಮೊದಲ ಬಾರಿಗೆ ಹೋಟೆಲ್ಗಳು ರಾತ್ರಿ ಪೂರ್ತಿ ತೆರೆಯಲು ಅವಕಾಶ ನೀಡಿತ್ತು.
ಸಿಲಿಕಾನ್ ಸಿಟಿ ಯಾವಾಗಲೂ ಜನ ಜನಜಂಗುಳಿಯಿಂದ ಕೂಡಿರುತ್ತೆ. ರಾತ್ರಿ ಪಾಳಿಯಲ್ಲಿ ಸಾವಿರಾರು ಜನರು ಕೆಲಸ ಮಾಡ್ತಿದ್ದಾರೆ. ರಾತ್ರಿ ಪಾಳಿ ಕೆಲಸ ಮಾಡುವವರ ಊಟ, ತಿಂಡಿಗೆ ಅನುಕೂಲವಾಗಲೆಂದೆ 24 ಗಂಟೆ ಹೋಟೆಲ್ ತೆರೆಯಲು ಅನುಮತಿ ನೀಡಿ ಕಾರ್ಮಿಕ ಇಲಾಖೆ ಅಧಿಸೂಚನೆ ಹೊರಡಿಸಿತ್ತು.
ಇದೀಗ ಸರ್ಕಾರದ ಆದೇಶವನ್ನು ರೆಸಿಡೆಂಟ್ ವೆಲ್ ಫೇರ್ ಅಸೋಸಿಯೇಷನ್ ತೀವ್ರವಾಗಿ ವಿರೋದಿಸಿದೆ. ರಾತ್ರಿ ಟೈಂ ಹೆಣ್ಮಕ್ಕಳಿಗೆ ತೊಂದರೆ ಆದ್ರೆ ಸರ್ಕಾರವೇ ಕಾರಣ ಎಂದು ಎಚ್ಚರಿಕೆ ನೀಡಿದ್ದಾರೆ.
PublicNext
26/04/2022 08:56 pm