ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇವನಹಳ್ಳಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕೂದಲಳತೆ ಅಂತರದಲ್ಲಿ ತಪ್ಪಿದ ಭಾರಿ‌ ಅನಾಹುತ

ದೇವನಹಳ್ಳಿ: ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೂದಲಳತೆಯ ಅಂತರದಲ್ಲಿ ಭಾರಿ‌ ಅನಾಹುತ ತಪ್ಪಿದೆ. ಟೇಕ್ ಆಫ್​ ಆಗುವ ವೇಳೆ ಒಂದೇ ದಿಕ್ಕಿನಲ್ಲಿ ಎರಡು ವಿಮಾನಗಳು ಮುಖಾಮುಖಿ ಬಂದಿದ್ದು, ಸ್ವಲ್ಪದರಲ್ಲೇ ಈ ಅನಾಹುತ ತಪ್ಪಿದೆ.

ಜನವರಿ 7ರಂದು‌ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಒಂದೇ ಸಮಯದಲ್ಲಿ ಟೇಕ್ ಆಫ್‌ಗೆ ಬಂದ ಎರಡೂ ವಿಮಾನಗಳು ಇಂಡಿಗೋ ವಿಮಾನ ಸಂಸ್ಥೆಯದ್ದಾಗಿವೆ. ಕೊಲ್ಕತ್ತಾ ಮತ್ತು ಭುವನೇಶ್ವರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನಗಳು ಇವಾಗಿದ್ದವು. 6E455 ಮತ್ತು 6E246 ಸಂಖ್ಯೆಯ ಇಂಡಿಗೋ ವಿಮಾನಗಳು. ಎರಡೂ ವಿಮಾನಗಳಲ್ಲಿ ನೂರಾರು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು.

ಈ ರೀತಿ ಟೇಕ್‌ ಆಫ್ ಆಗಲು ಅವಕಾಶವೇ ಇಲ್ಲ. ರನ್ ವೇ ಎಟಿಸಿ ಅಧಿಕಾರಿಗಳ ಸಂವಹನ ಕೊರತೆಯಿಂದ ಈ ಅವಾಂತರ ನಡೆದಿದೆ. ಆಚಾತುರ್ಯ ಗಮನಕ್ಕೆ ಬರುತ್ತಿದ್ದಂತೆ ರೆಡಾರ್ ನೀಡಿದ ಮನ್ಸೂಚನೆಯಿಂದ ಇಬ್ಬರೂ ಪೈಲೆಟ್‌ಗಳು ತಮ್ಮ ಮಾರ್ಗ ಬದಲಿಸಿದ್ದಾರೆ. ನಂತರ ಎರಡೂ ವಿಮಾನಗಳು ತಮ್ಮ ಮಾರ್ಗ ತಲುಪಿವೆ.

ಈ ಬಗ್ಗೆ ಎರಡೂ ರನ್ ವೇಗಳ ಎಟಿಸಿ ಅಧಿಕಾರಿಗಳ ಸಂವಹನ ಕೊರತೆಯ ಬಗ್ಗೆ ಅಧಿಕಾರಿಗಳು ಯಾವುದೇ ಮಾಹಿತಿಯನ್ನು ರಾಜ್ಯ ಮತ್ತು ‌ಕೇಂದ್ರ ಯಾವುದೆ ನಿಯಂತ್ರಿತ ಪ್ರಾಧಿಕಾರಕ್ಕೆ ತಿಳಿಸಿಲಿಲ್ಲ. ಮತ್ತು ಅವಾಂತರದ ಬಗ್ಗೆ ಎಲ್ಲಿಯೂ ದಾಖಲು ಮಾಡಿರಲಿಲ್ಲ. ಇದೀಗ ಸುದ್ದಿ ಹಬ್ಬುತ್ತಿದ್ದಂತೆ ನಾಗರಿಕ ವಿಮಾನಯಾನ ನಿರ್ದೇನಾಲಯ ಅಥವಾ ಭಾರತೀಯ ವಿಮಾನಯಾನ ಪ್ರಾಧಿಕಾರಕ್ಕಾಗಲಿ ವರದಿ ನೀಡಬೇಕು. ಕೆಂಪೇಗೌಡ ವಿಮಾನ ನಿಲ್ದಾಣದ ಪುಸ್ತಕದಲ್ಲಾಗಲಿ, ಎಲ್ಲಿಯೂ ಈ ಅಚಾತುರ್ಯದ ಬಗ್ಗೆ ದೂರು, ವರದಿ ದಾಖಲಾಗಿಲ್ಲ.

ಈ ಬಗ್ಗೆ ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ‌ ನಿಲ್ದಾಣದ ಪೊಲೀಸರಿಗಾಗಲಿ ಮಾಹಿತಿ ಇರಲಿಲ್ಲ. ಈ ಸಂಬಂಧ ವಿಮಾನ ನಿಲ್ದಾಣ ಪ್ರಾಧಿಕಾರ ಅಥವಾ ಹಿರಿಯ ಅಧಿಕಾರಿಗಳು ಘಟನೆ ಬಗ್ಗೆ ತೀವ್ರ ತನಿಖೆ‌ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕಿದೆ. ಇದೇ ರೀತಿ ಎರಡೂ ರನ್‌ ವೇಗಳಲ್ಲಿ ಏಕಕಾಲಕ್ಕೆ ವಿಮಾನಗಳ ಹಾರಾಟವಾಗಿ,‌ ಮುಂದಿನ ಹಂತದ ಹಾರಾಟದಲ್ಲಿ ಅಪಘಾತವಾಗಿದ್ದರೆ ಅಪಾರ ಪ್ರಮಾಣದ ಜೀವಹಾನಿ ಆಗುತ್ತಿತ್ತು. ಆದ್ದರಿಂದ ತಪ್ಪಿತಸ್ಥರ ವಿರುದ್ಧ ಕ್ರಮಜರುಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Edited By : Vijay Kumar
PublicNext

PublicNext

20/01/2022 11:05 am

Cinque Terre

29.83 K

Cinque Terre

1

ಸಂಬಂಧಿತ ಸುದ್ದಿ