ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನೂರರ ಗಡಿ ದಾಟಿದ ತರಕಾರಿ ಬೆಲೆ; ಗ್ರಾಹಕ ಕಂಗಾಲು

ವರದಿ: ಗಣೇಶ್ ಹೆಗಡೆ

ಬೆಂಗಳೂರು: ರಾಜ್ಯಾದ್ಯಂತ ಬಿಟ್ಟೂ ಬಿಡದೆ ಮಳೆಯಾಗುತ್ತಿದೆ. ಸಾಕಷ್ಟು ಬೆಳೆಗಳು ಮಳೆಗೆ ನಾಶವಾಗಿದ್ದರೆ, ಇನ್ನಷ್ಟು ಕಡೆ ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ತಲುಪಿಸಲಾಗದೆ ಪರದಾಡುವ ಸ್ಥಿತಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ತರಕಾರಿ ಬೆಲೆ ಗಗನಕ್ಕೇರಿದ್ದು, ನಗರದಲ್ಲಿ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ.

ಮಳೆ ಕಡಿಮೆಯಾಗುವವರೆಗೂ ದಿನನಿತ್ಯದ ತರಕಾರಿ ಬೆಳೆಗಳ ಬೆಲೆಯಿಂದಾಗಿ ಕೈ ಸುಡೋದು ಗ್ಯಾರಂಟಿ.

ನಗರಕ್ಕೆ ತರಕಾರಿಗಳ ಸರಬರಾಜು ಕಡಿಮೆಯಾಗಿದ್ದು, ಬೆಲೆ ಏರಿಕೆಗೆ ಕಾರಣವಾಗಿದೆ. ಇನ್ನೊಂದೆಡೆ ಬೆಲೆ ಏರಿಕೆಯಿಂದ ಹಾಗೂ ನಿರಂತರ ಮಳೆಯಿಂದಾಗಿ ತಳ್ಳು ಗಾಡಿಗಳಲ್ಲಿ ತರಕಾರಿ ಮಾರಾಟವಾಗದೆ ವ್ಯಾಪಾರಿಗಳೂ ನಷ್ಟ ಅನುಭವಿಸುತ್ತಿದ್ದಾರೆ.

* ಪ್ರತಿ ಕೆ.ಜಿ. ತರಕಾರಿ‌ ದರ‌ ವಿವರ:

ಮೆಣಸಿನಕಾಯಿ 65

ಟೊಮ್ಯಾಟೋ 100

ಹೀರೇಕಾಯಿ 68

ಬೆಳ್ಳುಳ್ಳಿ 110

ಈರುಳ್ಳಿ 48

ಕ್ಯಾಪ್ಸಿಕಮ್ 88

ಬಜ್ಜಿ ಮೆಣಸಿನಕಾಯಿ 65

ಬೆಂಡೆಕಾಯಿ 90

ಕ್ಯಾಬೇಜ್ 68

ಬದನೆ 100

ಬೀನ್ಸ್ 80

ಕ್ಯಾರೆಟ್ 90-100

ಹಾಗಲಕಾಯಿ - 48

Edited By : Shivu K
Kshetra Samachara

Kshetra Samachara

20/11/2021 02:21 pm

Cinque Terre

424

Cinque Terre

0

ಸಂಬಂಧಿತ ಸುದ್ದಿ