ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೊಡ್ಡಬಳ್ಳಾಪುರದಲ್ಲಿ ಜೂನ್ 24 ರಿಂದ ಮೂರು ದಿನಗಳ ಬೃಹತ್ ಡೇರಿ ಮೇಳ

ದೊಡ್ಡಬಳ್ಳಾಪುರ: ಕೃಷಿ ಮತ್ತು ಹೈನುಗಾರಿಕೆಗೆ ಸಂಬಂಧಿಸಿದ ಬೃಹತ್ ಡೇರಿ ಮೇಳ ದೊಡ್ಡಬಳ್ಳಾಪುರ ನಗರದಲ್ಲಿ ನಡೆಯಲಿದೆ. ಜೂನ್ 24 ರಿಂದ 26 ರವರೆಗೆ ಮೂರು ದಿನಗಳ ಕಾಲ ಬೃಹತ್ ಡೇರಿ ಮೇಳದಲ್ಲಿ ಅದೃಷ್ಟಶಾಲಿ ಹಸುವಿನ ಮಾಲೀಕರಿಗೆ 1 ಲಕ್ಷ ಬಹುಮಾನ ನೀಡಲಾಗುತ್ತಿದೆ.

ನಗರದ ಹಾಲು ಶೀಥಲ ಕೇಂದ್ರ ಘಟಕದ ಮುಂಭಾಗವಿರುವ ಮೈದಾನದಲ್ಲಿ ಡೇರಿ ಮೇಳ ನಡೆಯಲಿದ್ದು, ಡೇರಿ ಮೇಳವನ್ನ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಉದ್ಘಾಟಿಸಲಿದ್ದಾರೆ. ಬೃಹತ್ ಡೇರಿ ಮೇಳದ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಎಂಎಫ್, ಬಮೂಲ್ ನಿರ್ದೇಶಕ ಬಿ.ಸಿ.ಆನಂದಕುಮಾರ್ ತಾಲೂಕಿನಲ್ಲಿ ಇದೇ ಮೊದಲ ಬಾರಿಗೆ ರೈತರ ಅನುಕೂಲಕ್ಕಾಗಿ ಬೃಹತ್ ಡೇರಿ ಮೇಳ ಆಯೋಜನೆ ಹಮ್ಮಿಕೊಳ್ಳಲಾಗಿದೆ.

ತಾಲೂಕಿನ ಎಲ್ಲಾ ರೈತರು, ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ರೈತ ಬಾಂಧವರು ಇದರ ಸದುಪಯೋಗ ಪಡಿಸಿಕೊಳ್ಳಬೇಕು. ಡೇರಿ ಮೇಳದಲ್ಲಿ ಹೈನುಗಾರಿಕೆ ಹಾಗೂ ಕೃಷಿ ಉಪಕರಣಗಳ ಆಧುನಿಕ ತಂತ್ರಜ್ಞಾನದ ಮಾಹಿತಿ, ಪಶು ವೈದ್ಯಕೀಯ ಔಷಧಗಳ ಪ್ರದರ್ಶನ ಮಾಡಲಾಗುತ್ತದೆ.

ಮೇಳದಲ್ಲಿ ಲಕ್ಕಿ ಡ್ರಾ ಕೂಡ ಏರ್ಪಡಿಸಲಾಗಿದೆ. ಹಾಲು ಸಂಗ್ರಹಣಾ ಕೇಂದ್ರದಲ್ಲಿ ಲಾಟರಿ ಟಿಕೆಟ್ ಪಡೆದು ಭಾಗವಹಿಸಬಹುದಾಗಿದೆ. ಲಕ್ಕಿ ಡ್ರಾದಲ್ಲಿ ಹತ್ತು ಅದೃಷ್ಟಶಾಲಿ ವಿಜೇತರನ್ನು ಜೂನ್ 26 ರ ಸಂಜೆ ಮೇಳದಲ್ಲಿ ಘೋಷಿಸಲಾಗುವುದು ಎಂದರು. ಮೊದಲನೇ ಬಹುಮಾನ 1 ಲಕ್ಷ ರೂ.ವರಗೆ ಬಹುಮಾನ ನೀಡಲಾಗುವುದು ಎಂದರು.

ಶಾಸಕ ವೆಂಕಟರಮಣಯ್ಯ ಮಾತನಾಡಿ ಮೇಳದಲ್ಲಿ ನಂದಿನಿ ಪದಾರ್ಥಗಳ ಬಗ್ಗೆ ಅರಿವು ಮೂಡಿಸಲಾಗುವುದು. ನಿರುದ್ಯೋಗ ಯುವಕ, ಯುವತಿಯರು ಈ ಮೇಳದಲ್ಲಿ ಭಾಗವಹಿಸಿ ಸ್ವಯಂ ಉದ್ಯೋಗಿಗಳಾಗುವುದು ಹೇಗೆ ಎಂಬುದನ್ನು ಅರಿಯಬಹುದಾಗಿದೆ ಎಂದರು.

ಸಾಕಷ್ಟು ರೈತರಿಗೆ ಆಧುನಿಕ ಹೈನುಗಾರಿಕೆ ಬಗ್ಗೆ ಅರಿವು ಇಲ್ಲ. ಹಾಗಾಗಿ ಹೆಚ್ಚು ನಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ಈ ಮೇಳದಲ್ಲಿ ಆಧುನಿಕ ಹೈನುಗಾರಿಕೆ ಬಗ್ಗೆ ಅರಿವು ಸಹ ಮೂಡಿಸಲಾಗುತ್ತದೆ. ಪರಿಶಿಷ್ಟ ವರ್ಗದ ಜನತೆಯನ್ನು ಹೈನುಗಾರಿಕೆಯತ್ತ ಸೆಳೆಯಲು ಅವರಿಗೆ ವಿಶೇಷ ಆದ್ಯತೆ ನೀಡಲಾಗಿದೆ. ಗ್ರಾಮಗಳ ಡೇರಿಗಳಲ್ಲಿ ಅವರಿಗೆ ಉಚಿತ ನೋಂದಣಿಗೆ ಅವಕಾಶ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸವಲತ್ತುಗಳನ್ನು ಪರಿಶಿಷ್ಟ ವರ್ಗದ ಜನತೆಗೆ ನೀಡಲಾಗುವುದು ಎಂದರು.

ಡೇರಿ ಮೇಳ ದಲ್ಲಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಮಾಜಿ ಸಿಎಂ ವೀರಪ್ಪ ಮೊಯ್ಲಿ, ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ, ಮಾಜಿ ಕೃಷಿ ಸಚಿವ ಕೃಷ್ಣಬೈರೇಗೌಡ ಸೇರಿದಂತೆ ಸಹಕಾರ ಕ್ಷೇತ್ರದ ಹಲವರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

Edited By : Nagesh Gaonkar
PublicNext

PublicNext

23/06/2022 09:39 pm

Cinque Terre

45.68 K

Cinque Terre

1

ಸಂಬಂಧಿತ ಸುದ್ದಿ