ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಖಾಸಗೀಕರಣಗೊಳ್ಳುವತ್ತ ಮೊದಲ ಹೆಜ್ಜೆಯನ್ನು ಇಟ್ಟಿದೆ. ಹೌದು ಬಸ್ ಚಾಲಕರ ಕೊರತೆಯನ್ನು ಸರಿದೂಗಿಸಲು ಖಾಸಗೀ ಏಜೆನ್ಸಿಗಳ ಮೊರೆ ಹೋಗಿದೆ. ಈ ಸಂಬಂಧ 10 ಕೋಟಿ ರೂ.ಟೆಂಡರ್ ಅನ್ನು ಕರೆದಿದ್ದು, ಒಟ್ಟು 350 ಡ್ರೈವರ್ಗಳನ್ನು ನೇಮಕ ಮಾಡಲಾಗುತ್ತಿದೆ.
ಮಂಗಳೂರು 150, ಪುತ್ತೂರು 100, ರಾಮನಗರ ಮತ್ತು ಚಾಮರಾಜನಗರ ಕೆಎಸ್ಆರ್ಟಿಸಿ ಡಿಪೋಗಳಿಗೆ ತಲಾ 50 ಚಾಲಕರನ್ನು ನೇಮಕ ಮಾಡಲಾಗುತ್ತದೆ.
ಕೆಎಸ್ಆರ್ಟಿಸಿಯಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕವಾಗುವ ಸಿಬ್ಬಂದಿಗೆ 25 ದಿನಗಳ ಹಾಜರಾತಿಗೆ ತಕ್ಕಂತೆ ಸಂಭಾವನಾ ವೇತನವಾಗಿ 23,000 ರೂಪಾಯಿ ನೀಡಲಾಗುತ್ತದೆ. ಇನ್ನು ಚಾಲಕ 25 ದಿನಗಳವರೆಗೆ ಸೇವೆಯನ್ನು ಬಳಸಿಕೊಳ್ಳದಿದ್ದರೆ ಪ್ರತಿ ಗಂಟೆಗೆ 100 ರೂ.ಅನ್ನು ವೇತನವಾಗಿ ನಿಗಧಿಪಡಿಸಲಾಗುತ್ತದೆ.
ಇದು ಕೆಎಸ್ಆರ್ಟಿಸಿ ಸಂಸ್ಥೆಯ ಖಾಸಗೀಕರಣದ ಮೊದಲ ಹೆಜ್ಜೆಯಾಗಿದೆ. ಆದ್ರೆ ಸಾರ್ವಜನಿಕ ಸಾರಿಗೆಯ ಕಲ್ಪನೆಗೆ ಇದು ದೊಡ್ಡ ಹೊಡೆತ ನೀಡಲಿದೆ. ಏಕೆಂದರೆ ಬಸ್ ಚಾಲಕನ ಕೆಲಸವು ಬಹಳಷ್ಟು ಅಪಾಯವನ್ನು ಒಳಗೊಂಡಿರುತ್ತದೆ. ಹಾಗಾಗಿ ಅವರು ಕೇವಲ 25 ಸಾವಿರ ರೂ.ಗೆ ಕೆಲಸ ಮಾಡುತ್ತಾರೆ ಎಂದು ಹೇಗೆ ನಿರೀಕ್ಷಿಸಲಾಗುತ್ತಿದೆ? ಅಲ್ಲದೇ ಖಾಸಗಿ ಉದ್ಯೋಗಿಯು ಪ್ರಸ್ತುತ ಇರುವ ಉದ್ಯೋಗಿಗಳಂತೆ ಬದ್ಧರಾಗಿರುವುದಿಲ್ಲ. ಕೆಎಸ್ಆರ್ಟಿಸಿಯನ್ನು ಖಾಸಗೀಕರಣಗೊಳಿಸಲು ಇಂತಹದೊಂದು ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಕಾರ್ಮಿಕ ವಲಯ ಆರೋಪಿಸಿದೆ.
PublicNext
02/08/2022 04:27 pm