ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬೇಸಿಗೆ ಶುರುವಾಯ್ತು, ಕಲ್ಲಂಗಡಿ ಹಣ್ಣು ಸಿಲಿಕಾನ್ ಸಿಟಿಗೆ ಎಂಟ್ರಿ ಕೊಟ್ಟಿದಾಯ್ತು !

ಬೆಂಗಳೂರು: ಬೇಸಿಗೆ ಶುರು ಆಗಿದೆ. ಕಲ್ಲಂಗಡಿ ಹಣ್ಣು ಈಗ ಸಿಲಿಕಾನ್ ಸಿಟಿಗೆ ಲಗ್ಗೆ ಇಟ್ಟಾಗಿದೆ. ತಮಿಳುನಾಡಿನಿಂದಲೇ ಬೆಂಗಳೂರಿಗೆ ಬರುವ ಈ ಹಣ್ಣಿಗೆ ಭಾರಿ ಬೇಡಿಕೆನೂ ಇದೆ.KG ಗೆ 20 ರೂಪಾಯಿ ಆದರೂ ಜನ ಖರೀದಿಸಿ ಕಲ್ಲಂಗಡಿ ಹಣ್ಣಿನ ರುಚಿಯನ್ನ ಸವಿಯುತ್ತಿದ್ದಾರೆ.

ಬೇಸಿಗೆಗೆ ಕಲ್ಲಂಗಡಿ ಹಣ್ಣು ತುಂಬಾ ಒಳ್ಳೆಯದು. ಇದರಲ್ಲಿ ಶೇಕಡ 90 ರಷ್ಟು ನೀರಿನ ಅಂಶ ಇರುತ್ತದೆ. ವಿಟಮಿನ್ A ಮತ್ತು C ಕೂಡ ಇರುತ್ತದೆ. ಇವರೆಡೂ ದೇಹದ ಎಣ್ಣೆ ಅಂಶವನ್ನ ಕಡಿಮೆ ಮಾಡಿ,ಹೈಡ್ರೆಟ್ ಆಗಿಡುವುದಕ್ಕೆ ಸಹಾಯ ಮಾಡುತ್ತವೆ.

ಇನ್ನೊಂದೇನಪ್ಪ ಅಂದ್ರೆ, ಈ ಕಲ್ಲಂಗಡಿಯ ಹಣ್ಣಿನಲ್ಲಿ ಉನ್ನತ ಮಟ್ಟದ ಅರ್ಜಿನೈನ್ ಅನ್ನೋ ಅಮಿನೋ ಆಮ್ಲವೂ ಕೂಡ ಇರುತ್ತದೆ. ಇದು ಹೊಟ್ಟೆ ಭಾಗದ ಕೊಬ್ಬನ್ನು ಶೇಕಡ 60 ರಷ್ಟು ಕಡಿಮೆ ಮಾಡುತ್ತದೆ. ತೂಕ ಇಳಿಸಲೂ ಕೂಡ ಕಲ್ಲಂಗಡಿ ಹಣ್ಣು ಸಹಾಯಕಾರಿ ಆಗಿದೆ.

ಈ ಎಲ್ಲ ಕಾರಣಕ್ಕೇನೆ ಬೇಸಿಗೆಯಲ್ಲಿ ಬರೋ ಕಲ್ಲಂಗಡಿ ಹಣ್ಣನ್ನ ಜನ ಸೇವಿಸೋ ಅತಿ ಹೆಚ್ಚು ಇಷ್ಟ ಪಡುತ್ತಾರೆ. ಸೋ ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ತಿನ್ನಿ ಹೆಲ್ತಿಯಾಗಿರಿ.

-ರಂಜಿತಾ,ಎಂ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು

Edited By : Manjunath H D
PublicNext

PublicNext

05/03/2022 12:08 pm

Cinque Terre

36.31 K

Cinque Terre

0

ಸಂಬಂಧಿತ ಸುದ್ದಿ