ದೇವನಹಳ್ಳಿ: ಯೂರೋಪಿನ ಜಾರ್ಜಿಯಾದಲ್ಲಿ ನಡೆದ ಇಂಟರ್‌ನ್ಯಾಷನಲ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಕನ್ನಡದ ಕುವರಿ ಚಾರ್ವಿ(08) ಚಿನ್ನದ ಪದಕ ಗೆಲ್ಲುವ ಮೂಲಕ ದೇಶದ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದ್ದಾಳೆ. ಇಂಟರ್‌ನ್ಯಾಷನಲ್ ಚೆಸ್ ಚಾಂಪಿಯನ್‌ಶಿಪ್‌ನ 8ವರ್ಷ ವಯೋಮಾನ ವಿಭಾಗದಲ್ಲಿ ಹಾಸನದ ಚಾರ್ವಿ ಚಿನ್ನ ಗೆದ್ದು ಬಂದಿದ್ದಾರೆ.
ಚೆನ್ನ ಗೆದ್ದು ಇದೀಗ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮೂಲಕ ತಾಯ್ನಾಡಿಗೆ ಬಂದ ಬಾಲಕಿಗೆ ಪೋಷಕರು ಮತ್ತು ಕರ್ನಾಟಕ ಸ್ಟೇಟ್ ಚೆಸ್ ಅಸೋಸಿಯೇಷನ್‌ನಿಂದ ಅದ್ದೂರಿ ಸ್ವಾಗತ ಕೋರಲಾಯ್ತು. ಕಲಾ ತಂಡಗಳ ಮೂಲಕ ಸ್ವಾಗತ ಕೋರಿ ಏರ್ಪೋರ್ಟ್‌ನಿಂದ ತೆರೆದ ಜೀಪ್ನಲ್ಲಿ ಬೆಂಗಳೂರಿನವರೆಗೂ ಮೆರವಣಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಹಾಸನ ಜಿಲ್ಲೆ ಶ್ರವಣಬೆಳಗೊಳ ತಾಲೂಕು ಜಿನ್ನೆನಹಳ್ಳಿಯ ಚಾರ್ವಿ ಸಾಧನೆಗೆ ತವರಿನಲ್ಲಿ ಜನ ಹರ್ಷಗೊಂಡಿದ್ದಾರೆ. ಇದೇ ತಿಂಗಳ 14ರಂದು ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿದ್ದಳು. 08 ವರ್ಷದ ವಿಭಾಗದಲ್ಲಿ ವಿವಿದ ದೇಶಗಳಿಂದ 83ಜನ ಬಾಲಕಿಯರು ಭಾಗವಹಿಸಿದ್ದರು. ಸೆಪ್ಟೆಂಬರ್27ರಂದು ನಡೆದ ಪಂದ್ಯದಲ್ಲಿ ಚಿನ್ನೆ ಗೆದ್ದ ಚಾರ್ವಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾಳೆ..
PublicNext
29/09/2022 04:14 pm