ಬಿಜೆಪಿ ಭದ್ರ ಕೋಟೆಗೆ ಲಗ್ಗೆಯಿಡಲು ಜೆಡಿಎಸ್ ರಣತಂತ್ರ ರೂಪಿಸಿದೆ. ಬಿಬಿಎಂಪಿ ಮತ್ತು ವಿಧಾನಸಭೆ ಚುನಾವಣೆ ಹತ್ತಿರವಾಗ್ತಿದ್ದಂತೆ ಬಿಜಿಪಿ ಕಾರ್ಯಕರ್ತರನ್ನ ಜೆಡಿಎಸ್ ತೆಕ್ಕೆಗೆ ಸೆಳೆಯುವ ಕೆಲಸವನ್ನ ಮುಖಂಡರು ಮಾಡ್ತಿದ್ದಾರೆ.
ಕುಮಾರಸ್ವಾಮಿ ಯುವ ಸಂಘಟನೆಗೆ ಕರೆ ಕೊಡ್ತಿದ್ದಂತೆ ಯಶವಂತಪುರ ಜೆಡಿಎಸ್ ಮುಖಂಡರಾದ ಜವರಾಯಿಗೌಡ ಹಾಗೂ ಹನುಮಂತೆಗೌಡ ನೇತೃತ್ವದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರನ್ನ ಜೆಡಿಎಸ್ ಗೆ ಸೇರ್ಪಡೆ ಮಾಡಿಕೊಂಡಿದ್ದರೆ. ನಿನ್ನೆ ಯಶವಂತಪುರ ಕ್ಷೇತ್ರದ ಹೇರೋಹಳ್ಳಿ ವಾರ್ಡ್ ನಲ್ಲಿದ್ದ ಯಶವಂತಪುರ ಯುವ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಸೇರಿದಂತೆ ಹಲವು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಜೆಡಿಎಸ್ ಸೇರ್ಪಡೆಗೊಂಡು ಬಿಜೆಪಿಗೆ ಟಕ್ಕರ್ ನೀಡಿದ್ದಾರೆ.
PublicNext
27/09/2022 04:40 pm