ಬೆಂಗಳೂರು: ಪಿಎಸ್ಐ ಹಗರಣದಲ್ಲಿ ಆಡಿಯೋ ವೈರಲ್ ವಿಚಾರವಾಗಿ ಬಿಜೆಪಿ ಶಾಸಕ ದಡೇಸಗೂರುಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.
ಬೆಂಗಳೂರು ನಗರ ಪೋಲಿಸ್ ಆಯುಕ್ತರಿಗೆ ರಾಜ್ಯ ಕಾಂಗ್ರೆಸ್ ದೂರು ನೀಡಿದೆ. ಇದುವರೆಗೂ ಬಸವರಾಜ್ ದಡೇಸಗೂರು ವಿರುದ್ಧ ದೂರು ಯಾರು ನೀಡಿಲ್ಲ. ಯಾರಾದರೂ ದೂರು ನೀಡಿದ್ರೆ ಕ್ರಮ ತೆಗದುಕೊಳ್ಳುತ್ತೇವೆ ಎಂದು ಗೃಹ ಸಚಿವರು ಹೇಳಿದ್ದರು. ಹೀಗಾಗಿ, ಭ್ರಷ್ಟಾಚಾರ ನಿಗ್ರಹ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ.ಕೆಪಿಸಿಸಿಯ ಮಾನವ ಹಕ್ಕು ವಿಭಾಗದ ಬಿಂದು ಗೌಡ ಅವರಿಂದ ಈಗಾಗಲೇ ದೂರು ದಾಖಲಾಗಿದೆ.
PublicNext
24/09/2022 03:10 pm