ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

PAYCM ಪೋಸ್ಟರ್ ವಿಚಾರ: ಮೂವರು ಕಾಂಗ್ರೆಸ್ ಕಾರ್ಯಕರ್ತರ ಬಂಧನ

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಫೋಟೋ ಬಳಸಿ PAYCM ಪೋಸ್ಟರ್ ಅಂಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಹೈಗ್ರೌಂಡ ಪೊಲೀಸ್ರಿಂದ ಮೂವರು ಕಾಂಗ್ರೆಸ್ ಕಾರ್ಯಕರ್ತರ ಬಂಧನವಾಗಿದೆ‌.

ಬಿ.ಆರ್ ನಾಯ್ಡು, ಪವನ್ ಹಾಗೂ ಗಗನ್ ಬಂಧನವಾಗಿದ್ದು ಇನ್ನೂ ಕೆಲವರನ್ನ ವಶಕ್ಕೆ ಪಡೆಯಲಾಗಿದೆ. ಇನ್ನೂ ನಗರದಲ್ಲಿ ಪೇ ಸಿಎಂ ಶೀರ್ಷಿಕೆಯಡಿ ಸಿಎಂ ಫೋಟೋ ಬಳಸಿ ಪೋಸ್ಟ್ ಅಂಟಿಸಿದ ವಿಚಾರಕ್ಕೆ ನಗರದ ನಾಲ್ಕು ಕಡೆ ಎಫ್ಐಆರ್ ದಾಖಲಾಗಿತ್ತು. ಈ ಪ್ರಕರಣಗಳು ಸಿಸಿಬಿ ತನಿಖೆ ನಡೆಸಲು ಕಮಿಷನರ್ ಸೂಚಿಸಿದ್ರು.‌ ನಿನ್ನೆ ರಾತ್ರಿ ಹೈಗ್ರೌಂಡ್ ಹಾಗೂ ಸಿಸಿಬಿ ಪೊಲೀಸ್ರು ಜಂಟಿ ಕಾರ್ಯಾಚರಣೆ ನಡೆಸಿ ಎಂಟು ಜನರನ್ನ ವಶಕ್ಕೆ ಪಡೆದಿದೆ.‌ ಇದ್ರಲ್ಲಿ ಮೂವರು ಕಾಂಗ್ರೆಸ್‌ನ ಸಕ್ರಿಯ ಕಾರ್ಯಕರ್ತರು ಎಂದು ಹೇಳಲಾಗ್ತಿದೆ.

Edited By : Nagaraj Tulugeri
PublicNext

PublicNext

22/09/2022 11:44 am

Cinque Terre

18.35 K

Cinque Terre

10