ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಲೇಖಕಿ ಎಚ್ ಎಲ್ ಪುಷ್ಪಾ ಗೆಲುವು ಸಾಧಿಸಿದ್ದಾರೆ.
ಹಾಲಿ ಅಧ್ಯಕ್ಷೆ ವನಮಾಲಾ ಸಂಪನ್ನಕುಮಾರ್, ಲೇಖಕಿ ಎಚ್ ಎಲ್ ಪುಷ್ಪಾ ಹಾಗೂ ಕಥೆಗಾರ್ತಿ ಶೈಲಜಾ ಸುರೇಶ್ ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು.
ಎಚ್ ಎಲ್ ಪುಷ್ಪಾ ಅವರು 342 ಮತ ಗಳಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಹಾಲಿ ಅಧ್ಯಕ್ಷೆ ವನಮಾಲಾ ಸಂಪನ್ನ ಕುಮಾರ್ ಅವರಿಗೆ 280 ಮತಗಳು ದೊರೆತಿವೆ. ಹಾಗೆಯೇ ಶೈಲಜಾ ಸುರೇಶ್ ಅವರಿಗೆ 33 ಮತಗಳು ದೊರೆತಿವೆ. ಅಂಚೆ ಮತದಾನ ಮತ್ತು ಬೆಂಗಳೂರಿನಲ್ಲಿ ನಡೆದ ಮತದಾನದಲ್ಲಿ ಒಟ್ಟು 699 ಮತಗಳು ಚಲಾವಣೆಯಾಗಿದ್ದವು. ಅದರಲ್ಲಿ 44 ಮತಗಳು ಅಮಾನ್ಯಗೊಂಡಿವೆ.
ಸಂಘದಲ್ಲಿ ಒಟ್ಟು 1,330 ಸದಸ್ಯರಿದ್ದು ಅವರಲ್ಲಿ 1,295 ಮಂದಿ ಮತದಾನದ ಅರ್ಹತೆ ಹೊಂದಿದ್ದಾರೆ. ಚುನಾವಣೆಯಲ್ಲಿ ವಿಜೇತರಾದವರು ಮೂರು ವರ್ಷಗಳ ಕಾಲ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ.
Kshetra Samachara
18/09/2022 09:29 pm