ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಹೊಸಕೋಟೆಯ ಉಪ್ಪಾರಹಳ್ಳಿ ಮೋರಿ ಬ್ಲಾಕ್; ಮಳೆ ನೀರಿನಿಂದ ರಸ್ತೆ ಸಂಪೂರ್ಣ ಜಲಾವೃತ

ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ನಗರ ಅತ್ಯಂತ ವೇಗವಾಗಿ ಅಭಿವೃದ್ಧಿ ಆಗ್ತಿರುವ ಪ್ರದೇಶ. ಆದರೆ ಮೂಲಭೂತ ಸೌಲಭ್ಯ ರಸ್ತೆ ಚರಂಡಿ ಮೋರಿಗಳು ಇನ್ನಷ್ಟು ಶುದ್ಧ ಆಗಬೇಕು.

ವಿಪರ್ಯಾಸವೆಂಬಂತೆ ಹೊಸಕೋಟೆಯ ಚಿಕ್ಕಕೆರೆ ಕೋಡಿಯ ಒಂದು ಭಾಗದ ಮೋರಿ ಹೂಳು ಮತ್ತು ಕಸಕಡ್ಡಿ ತುಂಬಿ ಬ್ಲಾಕ್ ಆಗಿದೆ. ಪರಿಣಾಮ ಚರಂಡಿ ನೀರು ಮೋರಿಯಲ್ಲಿ ಹರಿಯದೆ ಇಳಿಜಾರಿನ ರಸ್ತೆಯಲ್ಲಿ ಎರಡು ಅಡಿ ನೀರು ನಿಂತು ವಾಹನ ಸವಾರರು ಪರದಾಡ್ತಿದ್ದಾರೆ. ಹೊಸೂರು- ಸರ್ಜಾಪುರ- ಹೊಸಕೋಟೆ- ದೇವನಹಳ್ಳಿ- ದೊಡ್ಡಬಳ್ಳಾಪುರಕ್ಕೆ ಈ ರಸ್ತೆ ಸಂಪರ್ಕ ಕೊಂಡಿ.

ಆದರೆ ಈ ಹೊಸಕೋಟೆ ಉಪ್ಪಾರಹಳ್ಳಿ ಇಳಿಜಾರು ರಸ್ತೆ ಜನರ ನೆಮ್ಮದಿ ಕೆಡಿಸಿದೆ. ಈ ಎಲ್ಲಾ ವಿಷಯ ಕುರಿತು ನಮ್ಮ ಪ್ರತಿನಿಧಿ ಸುರೇಶ್ ಬಾಬು ಸಮಸ್ಯೆ ಜಾಗದಿಂದ ನಡೆಸಿರುವ ವಾಕ್ ಥ್ರೂ ‌ಇಲ್ಲಿದೇ ನೋಡಿ.

Edited By : Manjunath H D
PublicNext

PublicNext

12/10/2022 09:41 pm

Cinque Terre

37.43 K

Cinque Terre

0

ಸಂಬಂಧಿತ ಸುದ್ದಿ