ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಿಎಂಟಿಸಿಯಿಂದ ಬಸ್ ಪೂಜೆ ಖರ್ಚಿಗೆ ಈ ವರ್ಷವೂ ಬರೀ 100 ರೂ. ಮಾತ್ರ!

ಬೆಂಗಳೂರು: ನಾಡಿನಾದ್ಯಂತ ಆಯುಧ ಪೂಜೆಯ ಸಂಭ್ರಮ. ಇತ್ತ ಬಿಎಂಟಿಸಿ ಸಾರಿಗೆ ಸಂಸ್ಥೆಯಿಂದ ಆಯುಧ ಪೂಜೆಯನ್ನ ಮಾಡಲಾಗ್ತಿದೆ. ಮಾರುಕಟ್ಟೆಯಲ್ಲಿ ನಿಂಬೆ, ಹೂವಿನ, ಹಾರದ ಬೆಲೆ ಹೆಚ್ಚಿದೆ. ಆದ್ರೆ ಬಿಎಂಟಿಸಿ ಸಾರಿಗೆ ಸಂಸ್ಥೆ ಮಾತ್ರ 100 ರೂಪಾಯಿಯಲ್ಲಿ ದಸರಾ ಆಚರಿಸಲು ಹಣ ನೀಡಿದೆ. ಹೀಗಾಗಿ ಬಿಎಂಟಿಸಿಯ ಜಿಪುಣತನದ ವಿರುದ್ಧ ಚಾಲಕರು, ಕಂಡಕ್ಟರ್‌ಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು, ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಆಯುಧ ಪೂಜೆ ಖರ್ಚು ವೆಚ್ಚಕ್ಕೆ ಈ ಬಾರಿಯೂ ಪ್ರತಿ ಬಸ್‌ಗೆ ಕೇವಲ 100 ರೂ, ನೀಡಿದ್ದು ,ಸಿಬ್ಬಂದಿಯ ಬೇಸರಕ್ಕೆ ಕಾರಣವಾಗಿದೆ.ಆಯುಧ ಪೂಜೆಗಾಗಿ ವಾಹನಗಳನ್ನು ಸ್ವಚ್ಛಗೊಳಿಸಿ, ಅಲಂಕಾರ ಮಾಡಿ ಪೂಜೆ ಮಾಡಲಾಗುತ್ತಿದೆ. ಸಾರಿಗೆ ಸಿಬ್ಬಂದಿ ತಾವು ನಿತ್ಯ ಓಡಿಸುವ ಬಸ್‌ಗಳನ್ನು ಇಂದು ಸಿಂಗರಿಸಿ ಪೂಜೆ ಮಾಡಿದ್ರು.

ಈ ಆಯುಧ ಪೂಜೆಯ ಖರ್ಚಿಗೆಂದು ಐದಾರು ವರ್ಷಗಳಿಂದ ಬಿಎಂಟಿಸಿ ಪ್ರತಿ ಬಸ್‌ಗೆ 100 ರೂ.ಮಾತ್ರ ನೀಡುತ್ತಾ ಬಂದಿದೆ.ಪೂಜಾ ಸಾಮಗ್ರಿಗಳ ಬೆಲೆ ಹೆಚ್ಚಾಗಿದ್ದು, ಪೂಜೆ ಖರ್ಚು ಹೆಚ್ಚಿಸಬೇಕು ಎಂದು ಪ್ರತಿ ವರ್ಷವೂ ಚಾಲಕರು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.ಹಿಂದಿನಂತೆಯೇ ಈ ಬಾರಿಯೂ ಪ್ರತಿ ಬಸ್‌ಗೆ 100 ನೀಡಿದಾರೆ. ಹೀಗಾಗಿ ಬಸ್ ಚಾಲಕರು ಅವರ ಹಣದಲ್ಲಿಯೇ ಆಯುಧ ಪೂಜೆ ಮಾಡುತ್ತಾ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

Edited By : Manjunath H D
PublicNext

PublicNext

04/10/2022 02:10 pm

Cinque Terre

26.11 K

Cinque Terre

5

ಸಂಬಂಧಿತ ಸುದ್ದಿ