ಮಹದೇವಪುರ: ನಿನ್ನೆ ಸಂಜೆ ಸುರಿದ ಮಳೆಯಿಂದ ಬೆಂಗಳೂರಿನ ಮಹದೇವಪುರ ರಸ್ತೆಗಳು ಜಲಾವೃತವಾಗಿದ್ದು, ಚರಂಡಿಗಳಂತಾಗಿವೆ. ಇನ್ನು ವಾಹನ ಸವಾರರು ಹೈರಾಣಾಗಿದ್ದಾರೆ. ಬೆಂಗಳೂರಿನ ಐಟಿಬಿಟಿ ಹಬ್ ಮಹದೇವಪುರ ಖ್ಯಾತಿಗೆ ತಕ್ಕಂತೆ ಅಭಿವೃದ್ಧಿಯಾಗಿಲ್ಲ.
ಅದಕ್ಕೆ ಬೆಸ್ಟ್ ಎಕ್ಸಾಂಪಲ್ ಈ ಕ್ಷೇತ್ರದ ರಸ್ತೆ ಮತ್ತು ಚರಂಡಿಗಳ ಅವ್ಯವಸ್ಥೆಯಾಗಿದೆ. ಆವಲಹಳ್ಳಿ - ರಾಂಪುರ ಮುಖ್ಯರಸ್ತೆಯ ಹಿರಂಡಗಹಳ್ಳಿ ಬಳಿ ಚರಂಡಿಯೇ ಇಲ್ಲ . ಈಸ್ಟ್ ಪಾಯಿಂಟ್ ಆಸ್ಪತ್ರೆ ಬಳಿ ರಸ್ತೆಯು ಸುಮಾರು 100 ಮೀಟರ್ ವರೆಗೆ ನೀರಿನಿಂದ ತುಂಬಿ ಹೋಗಿದೆ . ಇದರಿಂದ ವಾಹನ ಸವಾರರು , ಪಾದಚಾರಿಗಳು ಪರದಾಡುವಂತಾಗಿದೆ.
PublicNext
02/10/2022 03:09 pm