ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸುರಿಯುತ್ತಿರುವ ಮಳೆಗೆ ನೀರು ಹರಿಯುವುದಕ್ಕೆ ಜಾಗವಿಲ್ಲದೆ ಮೊದಲು ಎಲ್ಲೆಲ್ಲಿ ಕೆರೆ ಇದ್ವೋ ಅಲ್ಲಿಗೆ ನುಗ್ಗುತ್ತಿದೆ. ಕೆರೆಗಳೆಲ್ಲ ತನ್ನ ಜಾಗವನ್ನ ಮತ್ತೆ ಕೇಳುತ್ತಿದೆ ಎನ್ನುವಂತೆ ಪ್ರಕೃತಿ ಜನರಿಗೆ ತಕ್ಕ ಉತ್ತರ ಕೊಟ್ಟಿದೆ. ವಿವಿಧೆಡೆ ಕೆರೆಗಳೆಲ್ಲಾ ಒತ್ತುವರಿಯಾಗಿ ಬಿಲ್ಡಿಂಗ್‌ಮಯವಾಗಿದೆ. ಹಾಗೆ ಇಲ್ಲೊಂದು ಜಾಗದಲ್ಲೂ ಕೆರೆ ಒತ್ತೂವರಿಯಾಗಿ ಕಟ್ಟಡಗಳೇ ಕಾಣುತ್ತಿದ್ದು, ಕೆರೆಯಲ್ಲಿ ನೀರು ನಿಲ್ಲದಂತಾಗಿದೆ.
54 ಎಕರೆ ವಿಸ್ತೀರ್ಣ ಹೊಂದಿರುವ ಗಾಂಧಿನಗರ ಕೆರೆ ಇವತ್ತು ಕೇವಲ 20ರಿಂದ 23 ಎಕರೆ ಉಳಿದಿದೆ. ಉಲ್ಲಾಳ್ ವ್ಯಾಪ್ತಿಯಿಂದ ಬರುವ ಕೊಳಚೆ ನೀರು ಕೆರೆಗೆ ಸೇರುತ್ತಿದೆ. ಕೆರೆ ಜಾಗ ಇವತ್ತು ಕಟ್ಟಡಗಳಾಗಿ ಮಾರ್ಪಟ್ಟಿವೆ. ಇತ್ತೀಚಿನ ಮಳೆಗೆ ಎಲ್ಲಾ ಕೆರೆಗಳು ತುಂಬಿದ್ರು ಕೂಡ ಈ ಕೆರೆ ಮಾತ್ರ ತುಂಬಿಲ್ಲ. ಇದಕ್ಕೆ ಕಾರಣ ಏನು ಅಂತ ಸ್ಥಳೀಯರ ಏನು ಹೇಳ್ತಾರೆ ನೋಡೋಣ ಬನ್ನಿ..
15 ವರ್ಷಗಳ ಹಿಂದೆ ಬಳಕೆಯಲ್ಲಿದ್ದ ಕೆರೆಗೆ ಈಗ ಕೊಳಚೆ ನೀರು ಸೇರಿ ಕಲುಷಿತಗೊಂಡಿದ್ದು, ಉಪಯೋಗಕ್ಕೆ ಬಾರದ ಹಾಗೆ ದುರ್ವಾಸನೆಯಿಂದ ಕೂಡಿದೆ. ಇದಕ್ಕೆಲ್ಲ ನಿಜಕ್ಕೂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ.
ಈ ಹಿನ್ನಲೆ ಸಚಿವರು ಕೂಡ ಎರಡು ಮೂರು ಬಾರಿ ಕೆರೆಗೆ ಭೇಟಿ ನೀಡಿದ್ದು, 5 ಕೋಟಿ ರೂ. ಹಣವನ್ನು ಕೆರೆ ಅಭಿವೃದ್ಧಿಗಾಗಿ ಮೀಸಲಿಡಲಾಗಿದೆ. ಆದರೆ ಇದ್ಯಾವುದಕ್ಕೂ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ. ಕೆಲಸ ಮಾಡಿಸಲು ಮುಂದೆ ಬರುತ್ತಿಲ್ಲ. ಕೆರೆ ಒತ್ತುವರಿಯಾಗಿ ಮನೆ, ಬಿಲ್ಡಿಂಗ್‌ಗಳನ್ನ ನಿರ್ಮಾಣ ಮಾಡ್ತಿದ್ರು, ಯಾವುಕ್ಕೂ ಕ್ರಮ ತಗೆದುಕೊಳ್ಳುತ್ತಿಲ್ಲ. ಇವೆಲ್ಲವನ್ನ ನೋಡಿದ್ರೆ ಇದರ ಹಿಂದೆ ಅಧಿಕಾರಿಗಳ ಕೈವಾಡ ಇರೋದು ಎದ್ದು ಕಾಣ್ತಿದೆ.
-ರಂಜಿತಾಸುನಿಲ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು..
Kshetra Samachara
14/09/2022 01:30 pm