ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: - ಸಿಲಿಕಾನ್ ಸಿಟಿಗೆ ವರ್ಕ್ ಆಗಿಲ್ವಾ ಬಿಬಿಎಂಪಿ ಹೊಸ ಟೆಕ್ನಾಲಜಿ?

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಒಂದು ಟ್ರಾಫಿಕ್ ಮತ್ತೊಂದು ರಸ್ತೆ ಗುಂಡಿಗಳದ್ದೇ ದೊಡ್ಡ ಸಮಸ್ಯೆ. ಎಲ್ಲಿ ನೋಡಿದರೂ ಗುಂಡಿ, ಯಾವ ರಸ್ತೆ ನೋಡಿದರೂ ಗುಂಡಿ. ಬಿಬಿಎಂಪಿ ಎಷ್ಟೇ ತಿಪ್ಪರಲಾಗ ಹಾಕಿದರೂ, ಗುಂಡಿ ಮುಕ್ತ ಬೆಂಗಳೂರು ಮಾಡಲು ಸಾಧ್ಯವಾಗುತ್ತಿಲ್ಲ.

ಹೌದು ಈ ಹಿಂದೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಬಿಬಿಎಂಪಿಗೆ 15 ದಿನಗಳಲ್ಲಿ ಬೆಂಗಳೂರಿನ ಎಲ್ಲ ಗುಂಡಿಗಳು ಮುಚ್ಚಬೇಕು ಎಂದು ಆದೇಶ ನೀಡಿದರು. ಈ ಬಗ್ಗೆ ಬಿಬಿಎಂಪಿ ಕೂಡ ಕೆಲಸ ಮಾಡಿದ್ದು, ಹೊಸ ಟೆಕ್ನಾಲಜಿ ಬಳಸಿ ರಸ್ತೆ ಗುಂಡಿಗಳನ್ನು ಮುಚ್ಚಿದ್ರು. ಆದರೆ ಇಲ್ಲಿ ಒಂದು ಕಡೆ 1-2 ತಿಂಗಳು ಆಗಿ, ಡೆಡ್ ಲೈನ್ ಮುಗಿದರೂ ಕೂಡ ಬೆಂಗಳೂರಿನ ಮುಖ್ಯ ರಸ್ತೆಗಳಲ್ಲಿ ಇರುವ ಗುಂಡಿ ಮುಚ್ಚಿಲ್ಲ. ಮತ್ತೊಂದು ಕಡೆ ಹಾಕಿರುವ ಹೊಸ ರಸ್ತೆಗಳು ಕೂಡ ಕಿತ್ತು ಬಂದಿದೆ.

ಬೆಂಗಳೂರಿನ , ಟೌನ್ ಹಾಲ್ ಮುಂದೆ ಕಳೆದ ತಿಂಗಳಷ್ಟೇ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚಿದ್ದು, ಇದೀಗ ಮತ್ತೆ ಹೊಸ ರಸ್ತೆ ಕಿತ್ತು ಬಂದಿದೆ.

ರಸ್ತೆ ಗುಂಡಿಗಳನ್ನು ಮುಚ್ಚಲು ಬಿಬಿಎಂಪಿ ಉಪಯೋಗಿಸದ ಹೊಸ ತಂತ್ರಜ್ಞಾನ ವಿಫಲವಾಯಿತಾ ಅನ್ನೋ ಪ್ರಶ್ನೆ ಎದುರಾಗುತ್ತಿದೆ. ಸಿಲಿಕಾನ್ ಸಿಟಿ ಮಂದಿಗೆ ಗುಂಡಿ ಮುಕ್ತ ರಸ್ತೆ ಬರೀ ಕನಸಾಗಿ ಉಳಿದುಬಿಡುತ್ತಾ ಅನ್ನೋ ಅನುಮಾನ ಶುರುವಾಗಿದೆ.

Edited By : Suman K
PublicNext

PublicNext

22/10/2024 06:10 pm

Cinque Terre

8.7 K

Cinque Terre

1

ಸಂಬಂಧಿತ ಸುದ್ದಿ