ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಗುಂಡಿಗೆ ಸಿಲುಕಿ ರಸ್ತೆಗೆ ಬಿದ್ದ ವಿಕಲಚೇತನ ಮಹಿಳೆ- ಸ್ಥಳೀಯರ ನೆರವಿನಿಂದ ಪಾರು

ಬೆಂಗಳೂರು: ರಸ್ತೆ ಗುಂಡಿಯಿಂದಾಗಿ ವಿಕಲಚೇತನ‌ ಮಹಿಳೆ ಕೆಳಗೆ ಬಿದ್ದ ಘಟನೆ ನಡೆದಿದೆ. ವರ್ತೂರು ರಸ್ತೆಯಲ್ಲಿ ಮಳೆ‌ನೀರಿನಲ್ಲಿ ಬಿದ್ದ ಮಹಿಳೆಯ ವೀಡಿಯೊ ವೈರಲ್ ಆಗ್ತಿದೆ.

ರಸ್ತೆಯಲ್ಲಿ‌ ಮಳೆನೀರು ತುಂಬಿದ್ದು, ಕೆಸರು ಗುಂಡಿಯ ಮಧ್ಯೆ ವಾಹನ ಸಂಚಾರ ಸಂಚಕಾರ ತಂದಿದೆ. ಈ ವೇಳೆ ಕೆಸರು ಗುಂಡಿಯಲ್ಲಿ‌ ಮಹಿಳೆ ಸಿಲುಕಿ ಕೆಳಗೆ ಬಿದ್ದ ಮನ ಕಲಕುವ ದೃಶ್ಯಾವಳಿ ನೋಡಿ ಅಧಿಕಾರಿಗಳು ಜಾಣ ಕುರುಡುತನ ಬಿಡಬೇಕು. ಮಹಿಳೆ ಬೀಳ್ತಾ ಇದ್ದ ಹಾಗೇ ಸ್ಥಳೀಯರು ಮಹಿಳೆಗೆ ಸಹಾಯ ಮಾಡಿದ್ದಾರೆ. ಕೆಳಗೆ ಬಿದ್ದಿದ್ದ ಮಹಿಳೆಯನ್ನು ಮೇಲಕ್ಕೆತ್ತಿ ಅಪಾಯದಿಂದ ಪಾರು ಮಾಡಿದ್ದಾರೆ.

Edited By : Vinayak Patil
PublicNext

PublicNext

21/10/2024 09:46 pm

Cinque Terre

28.58 K

Cinque Terre

0

ಸಂಬಂಧಿತ ಸುದ್ದಿ