ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕಳ್ಳಸಾಗಾಣಿಕೆ ಮೂಲಕ ಲೈಂಗಿಕ ದಂಧೆಗೆ ತಳ್ಳಲಾಗಿದ್ದ 12 ಬಾಲಕಿಯರ ರಕ್ಷಣೆ

ಬೆಂಗಳೂರು: ಅಕ್ರಮವಾಗಿ ಕಳ್ಳಸಾಗಣೆ ಮಾಡಿ ವೇಶ್ಯಾವಾಟಿಕೆಯ ಕೂಪಕ್ಕೆ ತಳ್ಳಲ್ಪಟ್ಟಿದ್ದ 12 ಬಾಲಕಿಯರನ್ನ ಸಿಸಿಬಿಯ ಮಹಿಳಾ ಸಂರಕ್ಷಣಾ ದಳದ ಪೊಲೀಸರು ರಕ್ಷಿಸಿದ್ದಾರೆ. ಮೇ ತಿಂಗಳಿನಿಂದ ಅಕ್ಟೋಬರ್‌ವರೆಗಿನ ಅವಧಿಯಲ್ಲಿ ಸರ್ಕಾರೇತರ ಸಂಸ್ಥೆಗಳ (NGO) ಸಹಯೋಗದಲ್ಲಿ ಸುಮಾರು 11 ಕಡೆಗಳಲ್ಲಿ ಕಾರ್ಯಾಚರಣೆ ಕೈಗೊಂಡಿದ್ದ ಸಿಸಿಬಿ ಪೊಲೀಸರು 14 ರಿಂದ 17 ವರ್ಷದ ಅಪ್ರಾಪ್ತ ವಯಸ್ಸಿನ 12 ಬಾಲಕಿಯರನ್ನ ರಕ್ಷಿಸಿದ್ದಾರೆ.

ಇಬ್ಬರು ಸ್ಥಳೀಯ ಬಾಲಕಿಯರು, ತ್ರಿಪುರಾ, ಮಹಾರಾಷ್ಟ್ರ, ಪಂಜಾಬ್ ರಾಜ್ಯಗಳ ತಲಾ ಓರ್ವ ಬಾಲಕಿಯರು, ಪಶ್ಚಿಮ ಬಂಗಾಳದ ಮೂವರು, ಬಾಂಗ್ಲಾದೇಶ ಮೂಲದ ಮೂವರು ಸೇರಿದಂತೆ ಒಟ್ಟು 12 ಜನ ಬಾಲಕಿಯರನ್ನ ರಕ್ಷಿಸಲಾಗಿದೆ. ಉದ್ಯೋಗ, ಶಿಕ್ಷಣ ಮತ್ತಿತರ ಆಮಿಷವೊಡ್ಡಿ ಬಾಲಕಿಯರನ್ನ ಕರೆತಂದಿರುವ ಹಾಗೂ ಕೆಲ ಸಂದರ್ಭಗಳಲ್ಲಿ ಪೋಷಕರೂ ಸಹ ಈ ದಂಧೆಗೆ ಸಹಕರಿಸಿರುವ ಸಾಧ್ಯತೆಯಿದ್ದು ತನಿಖೆ ಮುಂದುವರೆಸಲಾಗಿದೆ.

ಒಟ್ಟು 26 ಜನ ಮಧ್ಯವರ್ತಿಗಳು ಹಾಗೂ ಐವರು ಗಿರಾಕಿಗಳನ್ನ ಬಂಧಿಸಲಾಗಿದೆ. ದಾಳಿ ಸಮಯದಲ್ಲಿ ರಕ್ಷಿಸಿರುವ ಬಾಲಕಿಯರನ್ನು ಸರ್ಕಾರೇತರ ಸಂಸ್ಥೆಗಳು, ಸಮಾಜ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಕಲ್ಯಾಣ ಇಲಾಖೆಯೊಂದಿಗೆ ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಮನೋ ಚಿಕಿತ್ಸೆ ಮತ್ತು ಪುನರ್ವಸತಿಯನ್ನು ಕಲ್ಪಿಸಲಾಗಿದೆ. ಹಾಗೂ ವಿದೇಶಿ ಮೂಲದ ಪ್ರಜೆಯೆಂದು ದೃಢಪಟ್ಟ ಬಾಲಕಿಯರನ್ನ ಅವರ ದೇಶಗಳಿಗೆ ವಾಪಸ್ ಕಳುಹಿಸಿಕೊಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.

Edited By : Suman K
PublicNext

PublicNext

22/10/2024 03:18 pm

Cinque Terre

11.1 K

Cinque Terre

0

ಸಂಬಂಧಿತ ಸುದ್ದಿ