ಬೆಂಗಳೂರು: ಕಳೆದ ಹಲವಾರು ವರ್ಷಗಳಿಂದಲೂ ಬೆಂಗಳೂರಿನ ರಸ್ತೆ ಗುಂಡಿಗಳ ಚರ್ಚೆಯ ವಿಷಯ ಚರ್ಚೆಯಾಗ್ತಿದೆ.ನಗರದ ಗುಂಡಿಗಳ ಪರಿಸ್ಥಿತಿ ಮಳೆಗಾಲದಲ್ಲಂತೂ ಮತ್ತಷ್ಟು ಹದೆಗೆಡುತ್ತದೆ.ಈ ನಡುವೆ ಬೆಂಗಳೂರಿನ ಐತಿಹಾಸಿಕ ಪ್ರದೇಶಗಳ ಪಟ್ಟಿಯಲ್ಲಿ ರಸ್ತೆ ಗುಂಡಿಯೊಂದು (Abizer's Pothole) ಕಾಣಿಸಿಕೊಂಡಿದೆ. ಗೂಗಲ್ ಮ್ಯಾಪ್‌ನಲ್ಲಿ ಕಾಣಿಸಿಕೊಂಡ ಈ ಗುಂಡಿ ಬಳಕೆದಾರರಿಂದ ಫೈವ್ ಸ್ಟಾರ್ ರೇಟಿಂಗ್ ಗಿಟ್ಟಿಸಿಕೊಂಡಿದೆ. ರಸ್ತೆ ಗುಂಡಿ ಗೂಗಲ್‌ನಲ್ಲೂ ನಾಗರಿಕರಿಂದ ಅತ್ಯುತ್ತಮ ರಿವ್ಯೂ ಗಿಟ್ಟಿಸಿಕೊಂಡಿದೆ.ಈ ಕುರಿತು ಟ್ವಿಟರ್ ಬಳಕೆದಾರರು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನ ಗುಂಡಿ ಗೂಗಲ್‌ನಲ್ಲೂ ಸ್ಥಾನ ಪಡೆದಿದ್ದು, ಅತ್ಯುತ್ತಮ ರಿವ್ಯೂ ಪಡೆದಿದೆ ಎಂದು ಟ್ವೀಟರ್ ಬಳಕೆದಾರರು ಉಲ್ಲೇಖಿಸಿದ್ದಾರೆ.
Kshetra Samachara
22/09/2022 01:47 pm