ಬೆಂಗಳೂರು: ಯಶವಂತಪುರದ ಬಿಬಿಎಂಪಿ ವಾಣಿಜ್ಯ ಸಂಕೀರ್ಣ ಕಟ್ಟಿ ಸುಮಾರು 45-50 ವರ್ಷವಾಗಿದೆ ಅಷ್ಟೇ. ಆದ್ರೆ ಈ ಕಟ್ಟಡವನ್ನ ಒಮ್ಮೆ ಸರಿಯಾಗಿ ನೋಡಿ. ಮೇಲ್ನೋಟಕ್ಕೆ ಥಳಕು ಒಳನೋಟಕ್ಕೆ ಕೊಳಕು ಎಂಬ ಗಾದೆಯಂತೆಯಾಗಿದೆ. ಇಲ್ಲಿರುವ ಸಮಸ್ಯೆಗಳು ನೋಡಿದ್ರೆ ಎಂಥವರಿಗೂ ಬೇಸರವಾಗುತ್ತೆ. ಈ ಕಟ್ಟಡ ಅಷ್ಟು ಅವ್ಯವಸ್ಥೆಯಿಂದ ಕೂಡಿದೆ. ಅಂದಹಾಗೆ ಇಲ್ಲಿ ಸರಿಯಾಗಿ ಒಂದು ಶೌಚಾಲಯ ಇಲ್ಲ. ಲಿಫ್ಟ್ ವ್ಯವಸ್ಥೆಯಂತೂ ಇಲ್ವೇ ಇಲ್ಲ. ಸರಿಯಾಗಿ ಕುಡಿಯಲು ನೀರಿಲ್ಲ. ರಾತ್ರಿ ಆದ್ರೆ ಸಾಕು ಈ ಕಟ್ಟಡ ಅನೈತಿಕ ಚಟುವಟಿಕೆಗಳ ತಾಣವಾಗುತ್ತೆ. ಸಮಸ್ಯೆಗಳ ತಾಣವೇ ಈ ಕಟ್ಟಡ ಅಂದ್ರೆ ತಪ್ಪಾಗಲ್ಲಕ್ಕಿಲ್ಲ. ನಿತ್ಯ ಮಕ್ಕಳು, ವಯೋವೃದ್ದರು ಹೀಗೆ ನೂರಾರು ಜನರು ಈ ಬಿಬಿಎಂಪಿ ವಾಣಿಜ್ಯ ಸಂಕೀರ್ಣ ಕಟ್ಟಡಕ್ಕೆ ಆಗಮಿಸುತ್ತಾರೆ.
ಇನ್ನೂ ಈ ಬಿಬಿಎಂಪಿ ವಾಣಿಜ್ಯ ಸಂಕೀರ್ಣ ಕಟ್ಟಡದ ಮೇಲೆ ಬೆಂಗಳೂರು-1 ಕಚೇರಿ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ, ಬೆಂಗಳೂರು ಮಹಾನಗರ ಪಾಲಿಕೆ ಯಶವಂತಪುರ ಉಪ ಆರೋಗ್ಯ ಕೇಂದ್ರ, ಜನನ ಮತ್ತು ಮರಣ ನೋಂದಾಣಿ ಕೇಂದ್ರ, ಪೋಸ್ಟ್ ಆಫೀಸ್, ಕಂದಾಯ ಇಲಾಖೆ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಇದೆ. ಏನಿಲ್ಲ ಅಂದ್ರು ಒಟ್ಟು 6 ಕಚೇರಿಗಳು ಈ ಕಟ್ಟಡದಲ್ಲಿದೆ. ಇನ್ನೂ ಎಷ್ಟೋ ಕಚೇರಿಗಳು ಇಲ್ಲಿ ಇದ್ವು. ಆದ್ರೆ ಇಲ್ಲಿರುವ ಅವ್ಯವಸ್ಥೆಯಿಂದ ಎಷ್ಟೋ ಕಚೇರಿಗಳು ಬಾಗಿಲು ಮುಚ್ಚಿಕೊಂಡು ಹೋಗಿದೆ. ಈಗ ಇರುವಂತಹ ಕಚೇರಿಗಳು ಸರ್ಕಾರಿ ಕಚೇರಿಯಾಗಿರುವುದರಿಂದ ಓಪನ್ ಇದೆ. ಆದ್ರೆ ನೂರಾರು ಜನರು ಓಡಾಡುವ ಈ ಕಚೇರಿಗಳಲ್ಲಿ ಇಂತಹ ಅವ್ಯವಸ್ಥೆ ಕೇಳುವವರಿಲ್ಲದಂತಾಗಿದೆ. ಇನ್ನೂ ಈ ಅವ್ಯವಸ್ಥೆಯಿಂದ ಜನರಂತೂ ಹೈರಾಣಾಗಿ ಹೋಗಿದ್ದಾರೆ. ಇಲ್ಲಿರುವ ಸಿಬ್ಬಂದಿಗಳ ಕಥೆಯಂತೂ ಹೇಳತೀರದಾಗಿದೆ. ಬೇರೆ ವಿಧಿ ಇಲ್ಲದೇ ಈ ಕಟ್ಟಡದಲ್ಲಿಯೇ ಸಿಬ್ಬಂದಿ ಕೆಲಸ ಮಾಡ್ತಿದ್ದಾರೆ.
ಈಗಾಗಲೇ ಮೊದಲ್ಲೇ ಕಟ್ಟಡದಲ್ಲಿ ಬಿರುಕು ಬಿದ್ದಿದೆ. ಮಳೆ ಬಂದಾಂಗತೂ ಈ ಕಟ್ಟಡದಲ್ಲಿ ಎಲ್ಲ ಕಡೆಯೂ ಸೋರುತ್ತೆ. ಜನರು ಆ ಟೈಮ್‌ನಲ್ಲಿ ಬಂದ್ರೆ ಕೈಕಾಲು ಮುರಿದುಕೊಳ್ಳುವುದು ಗ್ಯಾರಂಟಿ. ಹೀಗಾಗಿ ಜನಸಾಮಾನ್ಯರು ಅಧಿಕಾರಿಗಳ ವಿರುದ್ಧ ವ್ಯಾಪಕ ಆಕ್ರೋಶ ಹೊರಹಾಗ್ತಿದ್ದಾರೆ.
PublicNext
16/09/2022 04:20 pm